ಕರ್ನಾಟಕ

karnataka

ETV Bharat / state

ತುರ್ತು ಚಿಕಿತ್ಸಾ ಘಟಕ ನಿರ್ಮಾಣಕ್ಕೆ ಕರವೇ ಆಗ್ರಹ: ಮಾರನಹಳ್ಳಿಯಲ್ಲಿ ಪ್ರತಿಭಟನೆ - protest in maranhalli

ಮಾರನಹಳ್ಳಿ ಗ್ರಾಮಕ್ಕೆ ಆರೋಗ್ಯ ಉಪ ಕೇಂದ್ರ ಹಾಗೂ ಆ್ಯಂಬುಲೆನ್ಸ್​​ ನೀಡಬೇಕೆಂದು ಕರವೇ ಪ್ರವೀಣ್ ಶೆಟ್ಟಿ ಬಣ, ಮಾರನಹಳ್ಳಿಯ ಹಳೇ ವಿದ್ಯಾರ್ಥಿ ಸಂಘ ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

protest in maranhalli
ಮಾರನಹಳ್ಳಿಯಲ್ಲಿ ಪ್ರತಿಭಟನೆ

By

Published : Jan 18, 2020, 10:21 AM IST

ಹಾಸನ/ಸಕಲೇಶಪುರ: ಮಾರನಹಳ್ಳಿ ಗ್ರಾಮಕ್ಕೆ ಆರೋಗ್ಯ ಉಪ ಕೇಂದ್ರ ಹಾಗೂ ಆ್ಯಂಬುಲೆನ್ಸ್ ನೀಡಬೇಕೆಂದು ಕರವೇ ಪ್ರವೀಣ್ ಶೆಟ್ಟಿ ಬಣ, ಮಾರನಹಳ್ಳಿಯ ಹಳೆ ವಿದ್ಯಾರ್ಥಿ ಸಂಘ ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮಾರನಹಳ್ಳಿಯಲ್ಲಿ ಪ್ರತಿಭಟನೆ

ಬೆಂಗಳೂರು, ಹಾಸನ, ಚಿಕ್ಕಮಗಳೂರು, ಮಂಗಳೂರು ಕಡೆಗೆ ನಿತ್ಯ ಈ ಭಾಗದಲ್ಲಿ ಹೋಗುವ ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚಾರ ಮಾಡುವ ಪರಿಸ್ಥಿತಿಯಿದೆ. ನಿತ್ಯ ಶಿರಾಡಿಘಾಟ್ ಮಾರ್ಗವಾಗಿ ಸುಮಾರು 8 ಸಾವಿರಕ್ಕೂ ಅಧಿಕ ವಾಹನಗಳು ನಿತ್ಯ ಸಂಚಾರ ಮಾಡುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿಯೋ ಅಥವಾ ಚಾಲಕರ ನಿರ್ಲಕ್ಷ್ಯದಿಂದಲೋ ಅಫಘಾತಗಳು ಸಂಭವಿಸುತ್ತಲೇ ಇರುತ್ತವೆ.

ಕಳೆದ ವರ್ಷ ಇಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿರೋದು ಬೇಸರದ ಸಂಗತಿ. ಹಾಗಾಗಿ ಈ ಗಡಿ ಭಾಗದಲ್ಲಿ ತುರ್ತು ಚಿಕಿತ್ಸಾ ಘಟಕ ಮತ್ತು ಆ್ಯಂಬುಲೆನ್ಸ್ ನೀಡಬೇಕು. ಹಲವು ಬಾರಿ ಮನವಿ ಸಲ್ಲಿಸಿದ್ರೂ ಇದ್ರ ಬಗ್ಗೆ ಸರ್ಕಾರ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಯವರು ಈ ವಿಚಾರವಾಗಿ ತಕ್ಷಣ ಸ್ಪಂದಿಸಿ ಪ್ರತಿಭಟನೆಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details