ಹಾಸನ:ಜಿಲ್ಲೆಗೆ ಅಭಿವೃದ್ಧಿಗಾಗಿ ಮಂಜೂರಾಗಿದ್ದ ಕಾಮಗಾರಿಗಳನ್ನ ಸರ್ಕಾರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅವುಗಳನ್ನ ಮತ್ತೆ ಪ್ರಾರಂಭಿಸಬೇಕೆಂದು ಎಂದು ಆಗ್ರಹಿಸಿ ಕರವೇ ನಾರಾಯಣ್ ಗೌಡ ಬಣದ ಸಂಘಟನೆ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿತು.
ಹಾಸನ ಜಿಲ್ಲೆಗೆ ನೀಡಿದ್ದ ಅನುದಾನ ರಾಜ್ಯ ಸರ್ಕಾರದಿಂದ ವಾಪಸ್.. ಕರವೇ ಪ್ರತಿಭಟನೆ! - ಹಾಸನ-ಸಕಲೇಶಪುರ ಚತುಷ್ಪತ ರಸ್ತೆ
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮಧ್ಯಾಹ್ನ ಪ್ರತಿಭಟನೆ ಮಾಡಿದ ಕಾರ್ಯಕರ್ತರು, ಕಳೆದ ಬಜೆಟ್‌ನಲ್ಲಿ ರೂಪಿಸಿದ್ದ ಯೋಜನೆಳಿಗೆ ಅನುದಾನ ಬಿಡುಗಡೆಯಾಗಿದೆ. ಈ ಸರ್ಕಾರ ಬಿಡುಗಡೆ ಮಾಡಿದ ಹಣವನ್ನ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅಭಿವೃದ್ಧಿಯ ದೃಷ್ಟಿಯಿಂದ ಅನುದಾನ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ರು.

ನಗರದ ಚನ್ನಪಟ್ಟಣ ಕೆರೆಯ ಅಂಗಳದಲ್ಲಿರುವ ವಿಹಾರಿಧಾಮ ಅಭಿವೃದ್ದಿ ಮತ್ತು ಉದ್ಯಾನವನವನ್ನು ನಿರ್ಮಾಣ ಮಾಡುವುದು, ಸೌಂದರ್ಯೀಕರಣ ಕಾಮಗಾರಿ, ಶಾಂತಿಗ್ರಾಮದ ಮೊಸಳೆ ಹೊಸಹಳ್ಳಿಯಲ್ಲಿ ಪ್ರಾರಂಭಗೊಂಡ ಇಂಜಿನಿಯರಿಂಗ್ ಕಾಲೇಜಿಗೆ ಮೂಲಸೌಕರ್ಯ ಕಡಿತವೂ ಸೇರಿ ವಿಮಾನ ನಿಲ್ದಾಣ ಕಾಮಗಾರಿ, ಭೂಸ್ವಾಧೀನ ಪ್ರಕ್ರಿಯೆ, ಹಾಸನ-ಸಕಲೇಶಪುರ ಚತುಷ್ಪಥ ರಸ್ತೆ, ನಗರದಲ್ಲಿ ಹಾಳಾಗಿರೋ ರಸ್ತೆಗಳ ಡಾಂಬರೀಕರಣ ಸೇರಿ ಸ್ಥಗಿತಗೊಂಡ ಎಲ್ಲ ಕಾಮಗಾರಿಗಳನ್ನ ಕೈಗೆತ್ತುಕೊಳ್ಳಬೇಕು. ಇಲ್ಲವಾದ್ರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು.
TAGGED:
ಹಾಸನ-ಸಕಲೇಶಪುರ ಚತುಷ್ಪತ ರಸ್ತೆ