ಹಾಸನ:ವರ್ತಕರು ಮತ್ತು ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿರುವುದನ್ನು ಖಂಡಿಸಿ ಬೇಲೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು.
ದಲ್ಲಾಳಿಗಳಿಂದ ರೈತರಿಗೆ ಮೋಸ ಆರೋಪ: ಬೇಲೂರಲ್ಲಿ ಹಸಿರು ಸೇನೆಯಿಂದ ಪ್ರತಿಭಟನೆ
ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿರುವುದನ್ನು ಖಂಡಿಸಿ ಬೇಲೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿತು.
ರೈತರಿಗೆ ಮೋಸವಾಗುತ್ತಿರುವ ಬಗ್ಗೆ ಕಳೆದ 11 ವರ್ಷಗಳಿಂದ ಎಷ್ಟು ಬಾರಿ ಮನವಿ ಮಾಡಿದರೂ ಮಾತು ಕೇಳದ ಆಡಳಿತ ಮಂಡಳಿಯವರು ರೈತರ ಬಗ್ಗೆ ಕಳಜಿ ತೋರುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬೇಲೂರು ತಾಲೂಕು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಭೋಗ ಮಲ್ಲೇಶ್ ವರ್ತಕರು ಮತ್ತು ದಲ್ಲಾಳಿಗಳಿಂದ ರೈತರಿಗೆ ಮೋಸವಾಗುತ್ತಿರುವ ಬಗ್ಗೆ ಇಲ್ಲಿಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಕಾಳಜಿ ಇಲ್ಲ. ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ, ಇಲ್ಲಿ ಸುಮಾರು 50 ಕ್ಕೂ ಹೆಚ್ಚು ಮಳಿಗೆಗಳಿದ್ದರೂ ವರ್ತಕರು ಅಲ್ಲಿ ವ್ಯಾಪಾರ ಮಾಡದೇ ರಸ್ತೆ ಬದಿ ಮತ್ತು ಕೆಲವೆಡೆ ದಲ್ಲಾಳಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿರುವುದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.