ಕರ್ನಾಟಕ

karnataka

ETV Bharat / state

ಪೌರತ್ವ ಕಾಯ್ದೆ ತಿದ್ದುಪಡಿ ಖಂಡಿಸಿ ಹಾಸನದಲ್ಲಿ ಪ್ರತಿಭಟನೆ - ಪೌರತ್ವ ಕಾಯ್ದೆ ತಿದ್ದುಪಡಿ ಖಂಡಿಸಿ ಹಾಸನದಲ್ಲಿ ಪ್ರತಿಭಟನೆ

ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಖಂಡಿಸಿ ಹಾಸನದಲ್ಲಿ ಮುಸ್ಲಿಂ ಹಿತರಕ್ಷಣಾ ಒಕ್ಕೂಟಯಿಂದ ಪ್ರತಿಭಟನೆ ನಡೆಸಿದರು.

Protest in Hassan
ಪೌರತ್ವ ಕಾಯ್ದೆ ತಿದ್ದುಪಡಿ ಖಂಡಿಸಿ ಹಾಸನದಲ್ಲಿ ಪ್ರತಿಭಟನೆ

By

Published : Dec 18, 2019, 11:32 PM IST

ಹಾಸನ:ಪೌರತ್ವ ಕಾಯ್ದೆ ತಿದ್ದುಪಡಿ ಖಂಡಿಸಿ ಅಂಗಡಿ ಮುಂಗ್ಗಟ್ಟನ್ನು ಬಂದ್ ಮಾಡಿ ನಗರದ ವಲ್ಲಭಬಾಯಿ ರಸ್ತೆಯಲ್ಲಿರುವ ಅಮೀರ್ ಹುಸೇನ್ ಕಟ್ಟಡದ ಆವರಣದಲ್ಲಿ ಮುಸ್ಲಿಂ ಹಿತರಕ್ಷಣಾ ಒಕ್ಕೂಟ ಪ್ರತಿಭಟನೆ ನಡೆಸಿತು.

ಪೌರತ್ವ ಕಾಯ್ದೆ ತಿದ್ದುಪಡಿ ಖಂಡಿಸಿ ಹಾಸನದಲ್ಲಿ ಪ್ರತಿಭಟನೆ

ಮುಸ್ಲಿಂ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ನಾಸೀರ್ ಉಸೇನ್ ರೆಜ್ವಿ ಮಾತನಾಡಿ, ಎಲ್ಲಾ ಮುಸ್ಲಿಂ ಬಾಂಧವರು ಮತ್ತು ಸೆಕ್ಯೂಲರ್ ಪಾರ್ಟಿ ಒಂದಾಗಿ ಈ ದೇಶದ ಸ್ಥಿತಿ-ಗತಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಭಾರತವನ್ನು ಇಬ್ಭಾಗ ಮಾಡುವ ದುರುದ್ದೇಶವನ್ನಿಟ್ಟುಕೊಂಡು ತರಲಾಗಿರುವ ಪೌರತ್ವ ಕಾಯ್ದೆಯನ್ನು ನಮ್ಮ ಒಕ್ಕೂಟದಿಂದ ವಿರೋಧಿಸುತ್ತೇವೆ.

ಇದು ಅಂಸವಿಧಾನಿಕವಾದ ಒಂದು ಕಾಯ್ದೆಯಾಗಿದ್ದು, ಕೂಡಲೇ ರದ್ದು ಮಾಡಬೇಕು. ಭಾರತ ಜಾತ್ಯಾತೀತ ರಾಷ್ಟ್ರ. ಈಗ ಒಂದು ಆಕ್ಟ್​ನ್ನು ಜಾರಿಗೆ ತಂದು ಸಂವಿಧಾನವನ್ನೆ ಬದಲಾಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details