ಹಾಸನ: ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದರು. ನಗರದ ನಗರಸಭಾ ಕುವೆಂಪು ಸಂಭಾಂಗಣದಲ್ಲಿ ನಗರಸಭೆ ಹಾಗೂ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಮನೆ ನಿರ್ಮಾಣ ಮಾಡಲು ಜಮೀನು ವಿವಾದದ ಬಗ್ಗೆ ಆಯುಕ್ತರೊಂದಿಗೆ ಮಾಹಿತಿ ಪಡೆದುಕೊಂಡು ಸಮಸ್ಯೆ ಬಗೆಹರಿಸಿ ಅವರಿಗೆ ಮನೆ ಕಟ್ಟಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುತ್ತಮುತ್ತಲ ಸ್ವಚ್ಛತೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ನಾವು ಶುದ್ಧವಾಗಿದ್ದರೆ ನಮ್ಮ ಪರಿಸರ ಶುದ್ಧವಾಗಿಟ್ಟುಕೊಂಡರೆ ಅದು ದೇವರಿಗೆ ಹತ್ತಿರವಾದಂತೆ ಎಂಬ ಗಾಂಧೀಜಿ ಮಾತಿನಂತೆ ಪ್ರತಿಯೊಬ್ಬರು ಸ್ವಚ್ಛತೆಗೆ ಒತ್ತು ನೀಡಬೇಕು ಎಂದರು.