ಎಸ್ಪಿ ಹರಿರಾಮ್ ಶಂಕರ್ ಅವರು ಮಾತನಾಡಿದರು ಹಾಸನ:ವಸತಿ ಶಾಲೆಯಲ್ಲಿದ್ದ ಪ್ರೌಢ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ಪ್ರಾಂಶುಪಾಲರೊಬ್ಬರನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದಾರೆ.
ಹಾಸನದ ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳಿಗೆ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದ ತರುವಾಯ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.
'ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18ನೇ ತಾರೀಖಿಗೆ ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ಶಾಲೆಯಲ್ಲಿ 1098 ಚೈಲ್ಡ್ ಹೆಲ್ಪ್ಲೈನ್ನವರು ಶಾಲೆಗಳಲ್ಲಿ ಜಾಗೃತಿ ನೀಡುವ ಜೊತೆಗೆ ಅಲ್ಲಿರುವ 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಅವರಿಗೆ ಜಾಗೃತಿಯನ್ನು ಕೊಡಲಾಗಿತ್ತು.
ಈ ವೇಳೆ ಅಲ್ಲಿರುವ ಸುಮಾರು 15 ಮಕ್ಕಳು ನಮ್ಮ ಶಾಲೆಯ ಪ್ರಾಂಶುಪಾಲರಿಂದಲೇ ಬ್ಯಾಡ್ ಟಚ್ ಆಗಿದೆ ಎಂಬ ಹೇಳಿಕೆ ನೀಡಿದ್ದಾರೆ. ನಂತರ ಚೈಲ್ಡ್ ಡೆವಲಪ್ಮೆಂಟ್ ಹೆಲ್ತ್ ಆಫಿಸರ್ ಶಾಲೆಗೆ ಹೋಗಿ ಮಕ್ಕಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಆ ಹೇಳಿಕೆ ಆಧಾರದ ಮೇಲೆ ಅವರು ಪೊಲೀಸರ ಗಮನಕ್ಕೆ ತರುತ್ತಾರೆ. ನಂತರ ನಾವು ಚೈಲ್ಡ್ ವೆಲ್ಫೇರ್ ಕಮಿಟಿಯವರಿಂದ ಕಂಪ್ಲೇಂಟ್ ತೆಗೆದುಕೊಂಡು ಆರೋಪಿ ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈಗ ಮಕ್ಕಳನ್ನು ಕೌನ್ಸೆಲಿಂಗ್ ಮಾಡುತ್ತಿದ್ದೇವೆ' ಎಂದು ಎಸ್ಪಿ ಹರಿರಾಮ್ ಶಂಕರ್ ಅವರು ತಿಳಿಸಿದ್ದಾರೆ.
ಓದಿ:ಮಂಡ್ಯ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಂಧಿತ ಮುಖ್ಯ ಶಿಕ್ಷಕ ಅಮಾನತು