ಹಾಸನ/ಬೇಲೂರು: ನಮ್ಮ ಸಹಕಾರ ಸಂಘದಲ್ಲಿ ಸುಮಾರು 1, 600 ಷೇರುದಾರರಿದ್ದು, ಸುಮಾರು 2.5 ಕೋಟಿ ಕೃಷಿ ಸಾಲ ನೀಡಲಾಗಿದೆ. ಹಾಗೆಯೇ 120 ಸ್ವಸಹಾಯ ಸಂಘಗಳ ರಚನೆ ಮಾಡಿ, 30 ಲಕ್ಷ ಸಾಲ ನೀಡಲಾಗಿದೆ ಎಂದು ನೂತನ ಅಧ್ಯಕ್ಷ ಬಿ.ಗಿರೀಶ್ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ನಾಲ್ಕನೇ ಬಾರಿ ಅಧ್ಯಕ್ಷರ ಆಯ್ಕೆ! - hassan news
ನಮ್ಮ ಸಹಕಾರ ಸಂಘದಲ್ಲಿ ಸುಮಾರು 1, 600 ಷೇರುದಾರರಿದ್ದು, ಸುಮಾರು 2.5 ಕೋಟಿ ಕೃಷಿ ಸಾಲ ನೀಡಿದ್ದು 120 ಸ್ವಸಹಾಯ ಸಂಘಗಳ ರಚನೆ ಮಾಡಿ, 30 ಲಕ್ಷ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗಿದೆ ಎಂದು ನೂತನ ಅಧ್ಯಕ್ಷ ಬಿ.ಗಿರೀಶ್ ತಿಳಿಸಿದರು.
ಬೇಲೂರು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತತ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು, ರೈತರು ಹಾಗೂ ಶೇರುದಾರರ ಸಹಕಾರದಿಂದ ಸಹಕಾರ ಸಂಘದಲ್ಲಿ ಕಳೆದ 4 ಬಾರಿ ಯಾವುದೇ ಚುನಾವಣೆ ನಡೆಯದೆ 12 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಈಗಾಗಲೇ 30 ಲಕ್ಷ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗಿದ್ದು, ಸಂಘ ಲಾಭಾಂಶದಲ್ಲಿ ನಡೆಯುತ್ತಿದೆ. ಸುಮಾರು 1 ಕೋಟಿ 70 ಲಕ್ಷ ಸಾಲ ಮನ್ನವಾಗಿದ್ದು ಜೊತೆಗೆ ಗೊಬ್ಬರ ವಿತರಣೆ, ಪಡಿತರ ವಿತರಣೆ ಉಳಿತಾಯ ಖಾತೆ ನಿವ್ವಳ, ಠೇವಣಿ ಮೂಲಕ ನಮ್ಮ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದ್ದು, ನಮಗೆ ಈ ಬಾರಿ ಜಿಲ್ಲಾ ಬ್ಯಾಂಕಿನ ಸಹಾಯದ ಮೂಲಕ ಸ್ವಂತ ಕಟ್ಟಡವನ್ನು ಕಟ್ಟಲು ಎಲ್ಲಾ ನಿರ್ದೇಶಕರ ಜೊತೆ ಕೈಜೋಡಿಸುತ್ತೇವೆ ಎಂದು ತಿಳಿಸಿದರು.
ಉಪಾದ್ಯಕ್ಷರಾಗಿ ಬಿ.ಆರ್.ರುದ್ರಶೆಟ್ಟಿ, ನಿರ್ದೇಶಕರಾದ ಎಸ್.ನಾಗೇಶ್, ಹೆಚ್.ಟಿ.ರವಿ, ಸೋಮೇಗೌಡ, ಎಸ್.ಎ.ರಮೇಶ್, ಆರ್.ಎನ್.ಕಾಂತರಾಜು, ಶಾರದ, ಲಕ್ಷ್ಮಮ್ಮ, ಸಣ್ಣಲಿಂಗಯ್ಯ, ಕೃಷ್ಣನಾಯಕ್, ಹರೀಶ್, ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಎಂ.ಸಿ.ಶಕ್ಕು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ್, ದಿನೇಶ್, ಯಾಲಕ್ಕಿಗೌಡ ಇನ್ನು ಮುಂತಾದವರು ಹಾಜರಿದ್ದರು.