ಹಾಸನ :ನವೆಂಬರ್ 15 ರಂದು ಆಚರಿಸಲಾಗುವ ಕನಕ ಜಯಂತಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಸಮಾಜಕ್ಕೆ ಅವರ ಬದುಕು, ಮಾರ್ಗದರ್ಶನವನ್ನು ತಿಳಿಸುವ ಕೆಲಸವಾಗಬೇಕೆಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಕನಕ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆ - ಕನಕ ಜಯಂತಿ ಮಹೋತ್ಸವದ ಪೂರ್ವಭಾವಿ ಸಭೆ
ನವೆಂಬರ್ 15 ರಂದು ಕನಕ ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಚನ್ನರಾಯಪಟ್ಟಣದ ತಾಲೂಕು ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯ್ತು. ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಪಾಲ್ಗೊಂಡು ಸಿದ್ಧತೆಗಳ ಬಗ್ಗೆ ತಿಳಿಸಿದರು.
ಚನ್ನರಾಯಪಟ್ಟಣದಲ್ಲಿನ ತಾಲೂಕು ಕಚೇರಿಯಲ್ಲಿ ಅಯೋಜಿಸಿದ್ದ ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಚರಣೆಗೆ ಸರ್ಕಾರ ನೀಡುವ ಸಂಪನ್ಮೂಲದ ಜೊತೆಗೆ ಇನ್ನಿತರ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಿಸಿ ಸಮಾಜದ ಮುಖಂಡರ ಸೂಚನೆಯಂತೆ ಕನಕ ಜಯಂತಿ ಆಚರಣೆ ಮಾಡಲಾಗುವುದು. ತಾಲೂಕು ಕಚೇರಿ ಮುಂಭಾಗ ಶಾಮಿಯಾನ, 500 ಆಸನ ಮತ್ತು ವೇದಿಕೆ ನಿರ್ಮಾಣಕ್ಕೆ ಪುರಸಭೆಗೆ ಸೂಚನೆ ನೀಡಲಾಗಿದೆ. ಸಮಿತಿ ಸೂಚಿಸಿದ ನಾನಾ ಕ್ಷೇತ್ರದ 5 ಮಂದಿ ಸಾಧಕರಿಗೆ ಸನ್ಮಾನ, ನಾನಾ ಕಲಾತಂಡಗಳ ಮೆರವಣಿಗೆ ಮತ್ತು ಪ್ರಧಾನ ಭಾಷಣಕಾರರಾಗಿ ಕೋಟೆ ಸುಬ್ಬಣ್ಣನವರನ್ನು ಆಯ್ಕೆ ಮಾಡಲಾಗಿದೆ.
ಇದೇ ಸಂದರ್ಭ ಸಮಾಜದಿಂದ ರಾಜ್ಯದ ನೆರೆ ಸಂತ್ರಸ್ತರಿಗೆ ಕೈಲಾದಷ್ಟು ಧನಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡುವುದರ ಜೊತೆಗೆ, ಕಾರ್ಯಕ್ರಮಕ್ಕೆ ಆಗಮಿಸಿದ ನಾಗರಿಕರಿಗೆ ಸಿಹಿ ಮತ್ತು ಉಪಹಾರದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.