ಹಾಸನ: ಡಿಕೆ ಶಿವಕುಮಾರ್ ಪದಗ್ರಹಣದ ಹಿನ್ನೆಲೆಯಲ್ಲಿ ಇಂದು ಚನ್ನರಾಯಪಟ್ಟಣದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಡಿಕೆಶಿ ಪದಗ್ರಹಣದ ಹಿನ್ನೆಲೆ: ಮಾಜಿ ಶಾಸಕ ಪುಟ್ಟೇಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ - preliminary meeting
ಚನ್ನರಾಯಪಟ್ಟಣದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಮಾಜಿ ಶಾಸಕ ಪುಟ್ಟೇಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಸಭೆಯಲ್ಲಿ ಮಾತನಾಡಿದ ಪುಟ್ಟೇಗೌಡ ಅವರು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಪೂರ್ಣ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಡಿಕೆಶಿಯವರ ಕನಸಿನಂತೆ ಪ್ರತಿ ಗ್ರಾಮದಲ್ಲೂ ಕಾಂಗ್ರೆಸ್ ಬೆಳೆಯುತ್ತದೆ. ಅದರಿಂದಾಗಿ ಪದಗ್ರಹಣ ಹಿನ್ನೆಲೆಯಲ್ಲಿ ಪ್ರತಿ ಒಬ್ಬ ಕಾರ್ಯಕರ್ತರು ಡಿಕೆಶಿಗಾಗಿ ಪ್ರಮಾಣ ಮಾಡಬೇಕು ಎಂದರು.
ಪದಗ್ರಹಣ ದಿನದಂದು ಎಲ್ಲ ಮಾಧ್ಯಮಗಳಲ್ಲಿ, ಯೂಟ್ಯೂಬ್ ಹಾಗೂ ಫೇಸ್ಬುಕ್ಗಳಲ್ಲಿ ಲೈವ್ ಬರಲಿದೆ. ಪ್ರತಿಯೊಬ್ಬರು ಪ್ರತಿಜ್ಞಾ ವಿಧಿ ಮಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸೋಣ ಎಂದರು.