ಕರ್ನಾಟಕ

karnataka

ETV Bharat / state

ಜ.2ರಂದು ತುಮಕೂರಿಗೆ ಪ್ರಧಾನಿ ಮೋದಿ ಭೇಟಿ... ಹಾಸನದಲ್ಲಿ ಸಚಿವರಿಂದ ಪೂರ್ವಭಾವಿ ಸಭೆ - ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ

ತುಮಕೂರಿನಲ್ಲಿ ಜ.2 ರಂದು ನಡೆಯುವ ಕರ್ಮಣ್ಯ ಪ್ರಶಸ್ತಿ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಹಾಸನದಿಂದಲೂ ಹೆಚ್ಚಿನ ರೈತರನ್ನು ಕಳುಹಿಸುವಂತೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

Preliminary meeting in Hassan
ಹಾಸನದಲ್ಲಿ ಪೂರ್ವಭಾವಿ ಸಭೆ

By

Published : Dec 29, 2019, 11:54 AM IST

Updated : Dec 29, 2019, 12:06 PM IST

ಹಾಸನ: ತುಮಕೂರಲ್ಲಿ ಜ.2 ರಂದು ನಡೆಯುವ ಕರ್ಮಣ್ಯ ಪ್ರಶಸ್ತಿ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದೀಮದಲೂ ಹೆಚ್ಚಿನ ರೈತರನ್ನು ಕಳುಹಿಸುವಂತೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜ.2 ರಂದು ನಡೆಯುವ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ರೈತ ಪ್ರತಿನಿಧಿಗಳನ್ನು ಕಳುಹಿಸುವ ಕುರಿತು ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು. ಜ.2 ರಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ತುಮಕೂರಿಗೆ ಆಗಮಿಸಲಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರವೂ ಅನುದಾನ ಒದಗಿಸುತ್ತಿದೆ. ತುಮಕೂರು ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಸನ ಜಿಲ್ಲೆಗೂ ಸರ್ಕಾರದಿಂದ 60 ಬಸ್‍ಗಳನ್ನು ಕಳುಹಿಸಲಾಗುವುದು ಎಂದರು.

ಜಿಲ್ಲಾಧಿಕಾರಿಯವರು, ಜಂಟಿ ಕೃಷಿ ನಿರ್ದೇಶಕರು ಮತ್ತು ತಹಶಿಲ್ದಾರರ ಮೂಲಕ ಜಿಲ್ಲೆಯಿಂದ 3000 ಜನ ರೈತರನ್ನು ಕಾರ್ಯಕ್ರಮಕ್ಕೆ ಕಳುಹಿಸಿಕೊಡುವಂತೆ ತಿಳಿಸಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಅದರಲ್ಲೂ ತುಮಕೂರಿಗೆ ಹೊಂದಿಕೊಂಡಿರುವ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಿಂದ ಹೆಚ್ಚಿನ ಕೃಷಿಕರನ್ನು ಕಾರ್ಯಕ್ರಮಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ ಸಚಿವರು, ಪ್ರತಿ ತಾಲೂಕಿನ ತಹಶಿಲ್ದಾರರು ಹಾಗೂ ಕೃಷಿ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರ ಮೂಲಕ ರೈತರಿಗೆ ಮಾಹಿತಿ ನೀಡಿ ಅವರು ಇರುವ ಸ್ಥಳಗಳಿಂದಲೇ ಬಸ್‍ಗಳ ಮೂಲಕ ಕರೆದೊಯ್ಯಬೇಕು ಎಂದು ಸಲಹೆ ನೀಡಿದರು. ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚೆ ಕಾರ್ಯಕ್ರಮದ ಸ್ಥಳ ತಲುಪಬೇಕು. ಮಾರ್ಗಮಧ್ಯೆ ರೈತರಿಗೆ ಊಟ, ತಿಂಡಿ, ಕುಡಿಯುವ ನೀರನ್ನು ಪೂರೈಸಿ ಇದರ ವೆಚ್ಚವನ್ನು ಕೃಷಿ ಇಲಾಖೆ ಮೂಲಕ ಭರಿಸಲಾಗುವುದು ಎಂದರು.

ಜಿಲ್ಲಾ ರೈತ ಮುಖಂಡರು, ಪ್ರಗತಿಪರ ಕೃಷಿಕರು, ಸಾವಯವ ಕೃಷಿಕರು, ತೋಟದ ಮಾಲೀಕರು ಆಸಕ್ತರನ್ನು ಆಹ್ವಾನಿಸಿ ಕರೆ ತರುವಂತೆ ಸಚಿವರು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ತಹಶಿಲ್ದಾರರಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಇನ್ನಷ್ಟು ರೈತರು ಅಪೇಕ್ಷಿಸಿದ್ದಲ್ಲಿ ಹೆಚ್ಚಿನ ಬಸ್‍ಗಳನ್ನು ಒದಗಿಸಿಕೊಡಲಾಗುವುದು. ಆದ್ರೆ ಡಿ.30 ರೊಳಗೆ ಈ ಬಗ್ಗೆ ಅಂತಿಮ ವಿವರವನ್ನು ತಮಗೆ ಒದಗಿಸುವಂತೆ ಸಚಿವರು ಸೂಚನೆ ನೀಡಿದ್ರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಡಿ.30ರ ಸಂಜೆಯೊಳಗೆ ಅಂತಿಮ ಪಟ್ಟಿ ತಯಾರಿಸಲಾಗುವುದು. ಈಗಾಗಲೇ ಎಲ್ಲಾ ತಾಲೂಕು ತಹಶಿಲ್ದಾರ್​ಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ ಎಂದರು.

Last Updated : Dec 29, 2019, 12:06 PM IST

ABOUT THE AUTHOR

...view details