ಕರ್ನಾಟಕ

karnataka

ETV Bharat / state

ಹೊಳೆನರಸೀಪುರ: ದೇವಾಲಯದಲ್ಲಿ ‘‘ಪ್ರಸಾದ’’ ರಾಜಕೀಯ - MP prajwal revanna

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ನಿಮಿತ್ತ ಪ್ರಸಾದ ವಿತರಣೆ ವಿಷಯದಲ್ಲಿ ಜೆಡಿಎಸ್​ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರ ನಡುವೆ ವಾಗ್ಯುದ್ದ ನಡೆದಿದೆ.

prasada-politics-in-the-temple
ಹೊಳೆನರಸೀಪುರ: ದೇವಾಲಯದಲ್ಲಿ ‘‘ಪ್ರಸಾದ’’ ರಾಜಕೀಯ

By

Published : Mar 6, 2023, 9:19 PM IST

ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ದಿನದಂದು ಪ್ರಸಾದ ವಿತರಣೆ ವಿಷಯದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಜರುಗಿದ್ದು, ಕಳೆದ ಹತ್ತಾರು ವರ್ಷಗಳಿಂದ ಶಾಸಕ ಎಚ್.ಡಿ.ರೇವಣ್ಣ ಕುಟುಂಬ ದೇವಾಲಯದ ಆವರಣದಲ್ಲಿ ಪ್ರಸಾದ ವಿನಿಯೋಗ ಮಾಡುತ್ತಾ ಬಂದಿದ್ದಾರೆ. ಈ ವರ್ಷ ನಮಗೊಂದು ಅವಕಾಶ ಕೊಡಿ ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್​ ಮುಖಂಡ ಶ್ರೇಯಸ್ ಪಟೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಳೆದ 15 ದಿನಗಳ ಹಿಂದೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು.

ಪ್ರಸಾದ ಹಂಚಿಕೆಯಲ್ಲಿ ರಾಜಕೀಯ:ಮನವಿಗೆ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೆಳಗ್ಗೆ ದೇವಾಲಯದ ಆವರಣಕ್ಕೆ ಪ್ರಸಾದ ತಯಾರಿಕೆಗೆ ಬೇಕಾದ ದಿನಸಿ ಸಾಮಗ್ರಿಗಳು, ತರಕಾರಿ, ಸ್ಪೌವ್, ಪಾತ್ರೆ ಹಾಗೂ ಇತರ ವಸ್ತುಗಳನ್ನು ತಂದಾಗ ಪೊಲೀಸರು ಪ್ರಸಾದ ತಯಾರಿಕೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇವಾಲಯದ ಪ್ರಹಾಂಗಣಕ್ಕೆ ಆಗಮಿಸುತ್ತಿದಂತೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ತಳ್ಳಾಟ ಹಾಗೂ ಹೊಡೆದಾಟ ನಡೆದಿದೆ.

ಇದನ್ನೂ ಓದಿ :ಬಿಎಸ್​ವೈ ಹೆಲಿಕಾಪ್ಟರ್​​​ ಲ್ಯಾಂಡಿಂಗ್ ವೇಳೆ ಹಾರಿಬಂದ ಪ್ಲಾಸ್ಟಿಕ್ ವಸ್ತುಗಳು.. ಸೇಫ್​​​ ಆಗಿ ಲ್ಯಾಂಡಿಂಗ್​!

ದೇವಾಲಯದಲ್ಲಿ ಹೈಡ್ರಾಮಾ:ನಂತರ ದೇವಾಲಯದ ಮುಖ್ಯದ್ವಾರದಲ್ಲಿ ಅಡ್ಡವಾಗಿ ನಿಂತಿದ್ದ ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು ಅವರನ್ನು ಡಿವೈಎಸ್‌ಪಿ ಮುರಳೀಧರ, ಪಿಎಸ್ಐ ಅರುಣ್ ಸೇರಿದಂತೆ ಇತರ ಸಿಬ್ಬಂದಿಗಳು ಬಲವಂತವಾಗಿ ಎಳೆದು ದೇವಾಲಯದಿಂದ ಹೊರಗೆ ಹಾಕಿದ್ದರಿಂದ ದೇವಾಲಯದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿದರು. ಒಂದು ಕಡೆ ಕಾಂಗ್ರೆಸ್ ಪ್ರಸಾದ ಹಂಚಲೇಬೇಕು ಎಂದು ಪ್ರತಿಭಟನೆಗೆ ಮುಂದಾದರೆ ‘ಪ್ರಸಾದ ವಿತರಣೆ ಹೇಗೆ ಮಾಡುತ್ತಿರಾ ನಾನು ನೋಡ್ಬಿಡ್ತೀವಿ’ ಎಂದು ಸಂಸದ ರೇವಣ್ಣ ಪಟ್ಟು ಹಿಡಿದಿದ್ದಾರೆ. ದೇವಸ್ಥಾನದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಲಾಗಿತ್ತು.

ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಆರೋಪ :ಗಲಾಟೆ ವಿಡಿಯೋವನ್ನು ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತರ ಮೊಬೈಲ್ ಒಂದನ್ನು ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿದ್ದರಿಂದ, ಪೊಲೀಸರ ವಿರುದ್ಧ ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಚುನಾವಣೆ ಕಾವು ದೇವಸ್ಥಾನವನ್ನು ಬಿಡುತ್ತಿಲ್ಲ. ನೆಮ್ಮದಿಯಾಗಿ ಒಂದೆರಡು ನಿಮಿಷ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ಭಕ್ತರು ಬಂದರೆ ಅಲ್ಲಿಯೂ ರಾಜಕೀಯದ ಹೈಡ್ರಾಮದಿಂದ ಭಕ್ತರು ಪ್ರಸಾದ ಸ್ವೀಕರಿಸದೆ ಕೆಲವರು ಹಾಗೆ ಹೋಗಿದ್ದು ನಿಜಕ್ಕೂ ಬೇಸರದ ಸಂಗತಿ.

ಇದನ್ನೂ ಓದಿ:ನಮ್ಮ ಅವಧಿಯಲ್ಲಿ ಕಾಫಿ ತಿಂಡಿ ಊಟಕ್ಕೆ ಖರ್ಚಾಗಿದ್ದು 3.26 ಕೋಟಿ ರೂ: ಬಿಜೆಪಿಯ 200 ಕೋಟಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ABOUT THE AUTHOR

...view details