ಹಾಸನ:ಅನರ್ಹ ಶಾಸಕರ ವರ್ತನೆಯನ್ನ ಜನ ನೋಡಿದ್ದಾರೆ. ಆಸೆ ಆಮಿಷಕ್ಕೆ ಒಳಗಾಗಿ ಕ್ಷೇತ್ರದ 3 ಲಕ್ಷ ಜನರನ್ನು ಕೈಬಿಟ್ಟಿದ್ದನ್ನ ಗಮನಿಸುತ್ತಿದ್ದು ಈ ಬಾರಿಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಸಂಸದ ಪ್ರಜ್ವಲ್ ಭವಿಷ್ಯ ನುಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಹಾಸನದ ಬೇಲೂರು ಟ್ಯಾಕ್ಸಿ ಚಾಲಕರ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಜೆಡಿಎಸ್ ಶಾಸಕರು ಗೆದ್ದಿದ್ದ ಎಲ್ಲಾ ಕಡೆಯಲ್ಲೂ ಮತ್ತೊಮ್ಮೆ ಗೆಲ್ಲುತ್ತೇವೆ. ಆದರೆ ಕನಿಷ್ಠ ನಾಲ್ಕು ಸ್ಥಾನ ಗೆದ್ದೇಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ.
ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಬಹುದು. ಬೇರೆ ಪಕ್ಷದಿಂದಲೂ ನಿಲ್ಲಬಹುದು. ಪಕ್ಷೇತರರಾಗಿಯೂ ನಿಲ್ಲಬಹುದು. ಜಿಟಿ ದೇವೇಗೌಡ ಪುತ್ರ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರಜ್ವಲ್ ರೇವಣ್ಣ, ನಮ್ಮ ಪಕ್ಷದಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಅನ್ನೋದನ್ನ ದೇವೇಗೌಡರು ನಿರ್ಧಾರ ಮಾಡುತ್ತಾರೆ. ಈಗಾಗಲೇ ಹುಣಸೂರಿನಿಂದ 16 ಮಂದಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಸೂಕ್ತ ಮತ್ತು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವ ಬಗ್ಗೆ ನಮ್ಮ ಪಕ್ಷದಲ್ಲಿ ಚಿಂತನೆ ನಡೆದಿದೆ. ದೇವೇಗೌಡರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡು ಎಂದು ಸೂಚಿಸುತ್ತಾರೆ ಅಲ್ಲಿ ಕೆಲಸ ಮಾಡುತ್ತೇನೆ ಎಂದರು.
ಇನ್ನು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರದ ಬಗ್ಗೆ ನನಗೆ ಗೊತ್ತಿಲ್ಲ. ಚುನಾವಣೆ ವೇಳೆಯಲ್ಲಿ ಒಬ್ಬರ ವಿರುದ್ಧ ಒಬ್ಬರು ಮಾತನಾಡುವುದು ಸಹಜ ಎಂದು ಮಾತಿನಲ್ಲಿಯೇ ಜಾರಿಕೊಂಡ ಸಂಸದ, ಬಿಜೆಪಿ ಪಕ್ಷ ಸಂಘಟನೆಯ ರಾಜಕಾರಣ ಮಾಡಲಿ. ಅದನ್ನು ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ಅಲ್ಲ. ಬಿಜೆಪಿ ನಾಯಕರು ನಾವು ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳುತ್ತಿದ್ರು. ಆದರೆ ಅವರು ಮಾಡುತ್ತಿರುವುದು ಏನು ಎಂದು ಪ್ರಶ್ನೆ ಮಾಡಿ. . ? ಯಾವುದೇ ಪಕ್ಷ ಇರಲಿ ಅಭಿವೃದ್ಧಿಗೆ ತಡೆ ಮಾಡೋ ರಾಜಕೀಯ ಮಾಡಬಾರದು ಅಂತ ಕಿಡಿಕಾರಿದರು.
ಇನ್ನೂ ರಾಜ್ಯ ಸರ್ಕಾರದ ಬಳಿ ಹಣ ಇದ್ದರೆ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಏಕೆ ಸಿಎಂ ಬೊಗಸೆ ಚಾಚುತ್ತಿದ್ದರು. ಎನ್ನುವ ಮೂಲಕ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ, ಬೇಜವಾಬ್ದಾರಿಯಿಂದ ಮಾತನಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ನನ್ನ ಬಗ್ಗೆ ಕೆಲವರು ಮಾಧ್ಯಮದ ಪ್ರಚಾರಕ್ಕಾಗಿ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಹೈಕೋರ್ಟ್ನಲ್ಲಿ ನನ್ನ ವಿರುದ್ಧ ದೂರಿನ ಬಗ್ಗೆ ಸುಖಾಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ಇದೆ. ಆ ಪ್ರಕರಣದ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ನಾನು ನ್ಯಾಯಾಲಯದಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ನೀಡುತ್ತೇನೆ . ತಮ್ಮ ವಿರುದ್ಧ ಅಪೂರ್ಣ ಪ್ರಮಾಣ ಪತ್ರ ಸಲ್ಲಿಕೆ ಬಗ್ಗೆ ದಾಖಲಾಗಿರುವ ಬಗ್ಗೆ ಮಾತನಾಡಿದ ಅವರು ಕಳೆದ ಮೂರು ತಿಂಗಳಿಂದ ಇದೇ ರಾಗವನ್ನು ಹಾಡುತ್ತಿದ್ದಾರೆ. ಏನಾಗಿದೆ. ? ಪ್ರಜ್ವಲ್ ರಾಜೀನಾಮೆ ಕೊಟ್ಟರೆ ಅನರ್ಹರ ಆಗುತ್ತಾರೆ ಎಂದಿದ್ರು ಮೂರು ತಿಂಗಳಿಂದ ಯುವಕ ಒಳ್ಳೆ ಕೆಲಸ ಮಾಡ್ತಾ ಇಲ್ವಾ ದಯಮಾಡಿ ಇಂತಹ ಸುದ್ದಿಗಳಿಗೆ ಮಾಧ್ಯಮ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಡಿ ಎಂದು ಮನವಿ ಮಾಡಿದರು.