ಹಾಸನ:ನಾವು ಎಲ್ಲಾ ಧರ್ಮಿಯರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು.ಹಾಗಾಗಿ ಏಸು ಪ್ರತಿಮೆ ನಿರ್ಮಾಣ ಮಾಡಬಹುದು. ಅದರಲ್ಲಿ ತಪ್ಪೇನು ಇಲ್ಲ ಎಂದು ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನಗರದ 35ನೇ ವಾರ್ಡ್ನಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಸಿಎಂ ಬಿಎಸ್‌ವೈ ಕೂಡಲೇ ಪ್ರಧಾನಿ ಬಳಿಗೆ ಸರ್ವಪಕ್ಷದ ನಿಯೋಗ ಕರೆದುಕೊಂಡು ಹೋಗಿ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.
ಏಸು ಪ್ರತಿಮೆ ನಿರ್ಮಾಣದಲ್ಲಿ ತಪ್ಪೇನೂ ಇಲ್ಲಾ.. ಸಂಸದ ಪ್ರಜ್ವಲ್ ರೇವಣ್ಣ ರಾಜ್ಯ ಬಿಜೆಪಿಯವರಿಗೆ ಸರ್ಕಾರ ಬೇಕಿತ್ತೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ಕಳೆದ 6 ತಿಂಗಳಿಂದ ಅಭಿವೃದ್ಧಿಗಾಗಿ ಏನು ಕಾರ್ಯಕ್ರಮ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ನೆರೆ ಪರಿಹಾರವನ್ನು ತಾರತಮ್ಯ ಮಾಡಿ ಬೇಕಾಬಿಟ್ಟಿ ಹಂಚುತ್ತಿದ್ದಾರೆ. ಅವರ ಪಕ್ಷದವರಿಗೂ ಹಂಚಿದ್ದಾರೆ ಎಂದು ಕಿಡಿ ಕಾರಿದರು.
ಹಾಸನಕ್ಕೆ ನಾನೇ ಸಿಎಂ ಎಂಬ ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರ ಅವರು, ಶಾಸಕರು ವಯಸ್ಸು ಮೀರಿ ಮಾತನಾಡುತ್ತಿದ್ದಾರೆ. ಇದು ಒಳ್ಳೇದಲ್ಲ. ಸಿಎಂ ಹುದ್ದೆ ದೊಡ್ಡದು. ಹಿರಿಯರು, ಕಿರಿಯರು ಎಂಬ ಗೌರವ ತಿಳಿದು ಮಾತನಾಡಲಿ ಎಂದರು.