ಕರ್ನಾಟಕ

karnataka

ETV Bharat / state

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಕೆ: ಪ್ರಜ್ವಲ್​ ಸೇಫ್​ ಎಂದ ಹಿರಿಯ ವಕೀಲರು - undefined

ಪ್ರಜ್ವಲ್ ರೇವಣ್ಣ ಆಸ್ತಿಯನ್ನ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದು ಅಪರಾಧವೆಂದು ವಕೀಲ ದೇವರಾಜೇಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಇದರಿಂದ ಏನು ಆಗುವುದಿಲ್ಲ. ಆಸ್ತಿ ಮುಚ್ಚಿಟ್ಟು ನಾಮಪತ್ರದ ದಾಖಲಾತಿಯನ್ನ ಸಲ್ಲಿಸಿರಬಹುದು. ಆದ್ರೆ ಅದು ಉದ್ದೇಶಪೂರ್ವಕವಲ್ಲ. ಕಾನೂನಿನಲ್ಲಿ ಇದೊಂದಕ್ಕೆ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರುತ್ತಾರೆ ಅನ್ನೋದು ಶುದ್ಧ ಸುಳ್ಳು ಎಂದು ಹಿರಿಯ ವಕೀಲ ಧರ್ಮೇಂದ್ರ ಪ್ರತಿಪಾದಿಸಿದ್ದಾರೆ.

ಪ್ರಜ್ವಲ್​ ಸೇಫ್​ ಎಂದ ಹಿರಿಯ ವಕೀಲರು

By

Published : May 28, 2019, 4:43 PM IST

ಹಾಸನ: 2 ತಿಂಗಳಿಂದ ಚರ್ಚೆಯಲ್ಲಿದ್ದ ಮತ್ತು ಪ್ರಜ್ವಲ್ ರೇವಣ್ಣ ಎದುರಿಸುತ್ತಿದ್ದ ಕಾನೂನು ಸಮರಕ್ಕೆ ಜಯ ಸಿಗುತ್ತೆ ಎಂದು ಹಿರಿಯ ವಕೀಲ ಧರ್ಮೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಈಟಿವಿ ಭಾರತ​ ಜೊತೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಆಸ್ತಿಯನ್ನ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದು ಅಪರಾಧವೆಂದು ವಕೀಲ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದರು. ಇದರಿಂದ ಏನು ಆಗುವುದಿಲ್ಲ, ಆಸ್ತಿ ಮುಚ್ಚಿಟ್ಟು ನಾಮಪತ್ರದ ದಾಖಲಾತಿಯನ್ನ ಸಲ್ಲಿಸಿರಬಹುದು. ಆದ್ರೆ ಅದು ಉದ್ದೇಶಪೂರ್ವಕವಲ್ಲ. ಕಾನೂನಿನಲ್ಲಿ ಇದೊಂದಕ್ಕೆ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರುತ್ತಾರೆ ಎನ್ನುವುದು ಸುಳ್ಳು. ದೇವರಾಜೇಗೌಡ ಜಿಲ್ಲೆಯ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಕೀಲ ಧರ್ಮೇಂದ್ರ ಆರೋಪಿಸಿದರು.

ಪ್ರಜ್ವಲ್​ ಸೇಫ್​ ಎಂದ ಹಿರಿಯ ವಕೀಲರು

ಪ್ರಜ್ವಲ್ ಪ್ರಕರಣ ಸಂಬಂಧ ಏನ್ ಹೇಳುತ್ತೆ ಕಾನೂನು?

ಸೆಕ್ಷನ್ 123 (8A) ಅಡಿ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ರೆ ಮಾತ್ರ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನ್ಯಾಯಾಲಯ ಆದೇಶ ನೀಡುತ್ತೆ. ಜಾತಿ ಆಧಾರದ ಮೇಲೆ ಮತ ಕೇಳಿದರೆ, ಮತದಾರರಿಗೆ ಉಡುಗೊರೆ ನೀಡಿದರೆ, ಮತದಾರರರಿಗೆ ಹಣದ ಆಮಿಷವನ್ನೊಡ್ಡಿದರೆ, ಅಭ್ಯರ್ಥಿ ತನಗೆ ಮತಹಾಕುವಂತೆ ಒತ್ತಡ ಹೇರಿದರೆ, ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದೇ ವಾಹನದಲ್ಲಿ ಹಣ, ಮದ್ಯ, ಮತದಾರರಿಗೆ ಹಂಚಲು ಕೆಲವು ವಸ್ತುಗಳನ್ನು ಸಾಗಿಸುವಾಗ ಸಿಕ್ಕಿಬಿದ್ದ ವೇಳೆ ಪ್ರಕರಣ ದಾಖಲಾದರೆ 6 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸದಂತೆ ನ್ಯಾಯಾಲಯ ಆದೇಶ ನೀಡಬಹುದು. ಆದ್ರೆ ಪ್ರಜ್ವಲ್ ರೇವಣ್ಣ ಯಾವುದೇ ರೀತಿಯ ಚುನಾವಣಾ ಅಕ್ರಮ ಎಸಗಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಕಾನೂನಿಗೆ ಹೆದರುವ ಅವಶ್ಯಕತೆ ಇಲ್ಲವೆಂದು ವಕೀಲ ಧರ್ಮೇಂದ್ರ ಹೇಳಿದರು.

ಆಸ್ತಿ ಮುಚ್ಚಿಟ್ಟ ಪ್ರಕರಣ ಚುನಾವಣಾ ಆಯೋಗಕ್ಕೆ ಬರೋದಿಲ್ಲ:

ಆಸ್ತಿ ಮುಚ್ಚಿಟ್ಟ ಪ್ರಕರಣ ಚುನಾವಣಾ ಆಯೋಗ ವ್ಯಾಪ್ತಿಗೆ ಬರೋದಿಲ್ಲ. ಜನರ ಹಕ್ಕು ಕಾಯ್ದೆ 1951 ರ ಅಡಿ ಸೆಕ್ಷನ್ 125 ರ ಪ್ರಕಾರ ಆಸ್ತಿ ದಾಖಲಾತಿಗಳನ್ನು ಮುಚ್ಚಿಟ್ಟು ನಾಮಪತ್ರ ಸಲ್ಲಿಸಿರುವುದು ಆದಾಯ ತೆರಿಗೆ ಇಲಾಖೆಯಡಿ ಬರುತ್ತದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆಯವರು ಪ್ರಕರಣವನ್ನು ದಾಖಲಿಸಿ ಅದಕ್ಕೆ 6 ತಿಂಗಳು ಶಿಕ್ಷೆ ಅಥವಾ ದಂಡ ವಿಧಿಸಬಹುದಾಗಿದೆ. ಆದ್ರೆ ಚುನಾವಣಾ ಆಯೋಗ ಆಸ್ತಿ ಮುಚ್ಚಿಟ್ಟ ಪ್ರಕರಣವನ್ನು ಪ್ರಶ್ನಿಸುವ ಅಧಿಕಾರವನ್ನು ಸಹ ಹೊಂದಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಕಾನೂನಿನ ದವಡೆಗೆ ಸಿಲುಕುವುದಿಲ್ಲ ಎಂದು ಹಿರಿಯ ವಕೀಲ ಧರ್ಮೇಂದ್ರ ವಿವರಿಸಿದರು.

For All Latest Updates

TAGGED:

ABOUT THE AUTHOR

...view details