ಅರಕಲಗೂಡು (ಹಾಸನ): ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಗ್ರಾಮಸ್ಥರಿಗೆ ಸಹಾಯವಾಗಲಿ ಎಂದು ಪವರ್ ಮ್ಯಾನ್ ಒಬ್ಬರು ಸೊಂಟಮಟ್ಟದ ನೀರಿನಲ್ಲೇ ಸುಮಾರು 500 ಮೀಟರ್ ಸಾಗಿ ವಿದ್ಯುತ್ ಸಂಪರ್ಕ ಸರಿಪಡಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೊಂಟಮಟ್ಟ ನಿಂತ ನೀರಲ್ಲೇ ತೆರಳಿ ವಿದ್ಯುತ್ ದುರಸ್ತಿ ಕೈಗೊಂಡ ‘ಪವರ್ ಮ್ಯಾನ್’ - Chamundeshwari Electricity Corporation Limited
ಅರಕಲಗೂಡು ತಾಲೂಕಿನಲ್ಲಿ ಕಳೆದ 3 ದಿನದಿಂದ ಸತತವಾಗಿ ಮಳೆ ಆರ್ಭಟ ಜೋರಾಗಿದೆ. ಹೀಗಾಗಿ, ರಾಮನಾಥಪುರ ವ್ಯಾಪ್ತಿಯ ತೋಟವೊಂದರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು ಪವರ್ ಮ್ಯಾನ್ ಅಮಿತ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದರು.
ಎದೆಮಟ್ಟದ ನೀರಿನಲ್ಲಿ ತೆರಳಿ ವಿದ್ಯುತ್ ದುರಸ್ತಿ ಕೈಗೊಂಡ ‘ಪವರ್ಮಾನ್’
ಅರಕಲಗೂಡು ತಾಲೂಕಿನಲ್ಲಿ ಕಳೆದ 3 ದಿನದಿಂದ ಸತತವಾಗಿ ಮಳೆ ಆರ್ಭಟ ಜೋರಾಗಿದೆ. ಹೀಗಾಗಿ, ರಾಮನಾಥಪುರ ವ್ಯಾಪ್ತಿಯ ತೋಟವೊಂದರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರಿಗೆ ವಿದ್ಯುತ್ ಸಮಸ್ಯೆ ತಲೆದೋರಿದ್ದು ಪವರ್ ಮ್ಯಾನ್ ಬಳಿ ತಮ್ಮ ಕಷ್ಟ ಹೇಳಿಕೊಂಡಿದ್ದರು.
ರಾಮನಾಥಪುರ ಹೋಬಳಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದಲ್ಲಿ ಜೂನಿಯರ್ ಪವರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಮಿತ್ ತೋಟದಲ್ಲಿ ನಿಂತಿದ್ದ ನೀರಲ್ಲಿಯೇ ತೆರಳಿ ಬಳಿಕ ಮರವೇರಿ ವಿದ್ಯುತ್ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.