ಕರ್ನಾಟಕ

karnataka

ETV Bharat / state

ಆಶ್ರಯ ಯೋಜನೆಯ ಫಲಾನುಭವಿಗಳ ಅಂತಿಮ ಪಟ್ಟಿ ಮುಂದೂಡಿಕೆ - Postponement of final list of beneficiaries of the ashrya yojan

ಮಾನ್ಯ ಶಾಸಕರಾದ ಎ‌.ಟಿ. ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ 2019-2020 ರ ಆಶ್ರಯ ಯೋಜನೆಯ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಪಟ್ಟಣ ಪಂಚಾಯತ್​ಯಿಂದ ಅರ್ಜಿಗಳನ್ನು ಪರಿಶೀಲಿಸಿ ಪಟ್ಟಿ ತಯಾರಿಸಿದ್ದೇವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಜಿ ಪರಿಶೀಲನೆ ಮಾಡುವುದು ಬಾಕಿಯಿದೆ ಎಂದು ಪಟ್ಟಣ ಪಂಚಾಯತ್​ ಅಧ್ಯಕ್ಷ ಹೂವಣ್ಣ ತಿಳಿಸಿದ್ದಾರೆ.

ಪಟ್ಟಣ ಪಂಚಾಯತಿ ಅಧ್ಯಕ್ಷ ಹೂವಣ್ಣ
ಪಟ್ಟಣ ಪಂಚಾಯತಿ ಅಧ್ಯಕ್ಷ ಹೂವಣ್ಣ

By

Published : Dec 7, 2020, 12:18 PM IST

ಅರಕಲಗೂಡು: ಪಟ್ಟಣ ಪಂಚಾಯತ್​ ವ್ಯಾಪ್ತಿಯಲ್ಲಿ ಬರುವ ಆಶ್ರಯ ಯೋಜನೆಯ ಫಲಾನುಭವಿಗಳ ಅಂತಿಮ ಪಟ್ಟಿ ಪ್ರಕಟಣೆಯನ್ನು ಮುಂದೂಡಲಾಗಿದೆ ಎಂದು ಪಟ್ಟಣ ಪಂಚಾಯತ್​ ಅಧ್ಯಕ್ಷ ಹೂವಣ್ಣ ತಿಳಿಸಿದ್ದಾರೆ.

ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿ ಕುರಿತು ಹೂವಣ್ಣ ಪ್ರತಿಕ್ರಿಯೆ

ಸುದ್ದಿಗಾರರೊಂದಿಗೆ ಮಾತನಾಡಿದ ಹೂವಣ್ಣ ಅವರು, ಆಶ್ರಯ ಯೋಜನೆಯ ಅಧ್ಯಕ್ಷರು, ಮಾನ್ಯ ಶಾಸಕರಾದ ಎ‌.ಟಿ. ರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ 2019-2020 ರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಪಟ್ಟಣ ಪಂಚಾಯತ್​ನಿಂದ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ತಯಾರಿಸಿದ್ದೇವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಅರ್ಜಿ ಪರಿಶೀಲನೆ ಮಾಡುವುದು ಬಾಕಿಯಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ಸ್ವಲ್ಪ ವಿಳಂಬವಾಗಿದೆ ಎಂದರು.

ಇದುವರೆಗೂ 804 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಯಿಂದ ಅರ್ಜಿ ಪರಿಶೀಲನೆ ಬಾಕಿ ಇದೆ. ಮತ್ತು ಮೀಸಲಾತಿಗೆ ಅನುಗುಣವಾಗಿ ಪಟ್ಟಿ ತಯಾರಿಸುವ ಉದ್ದೇಶದಿಂದ ಸಮಿತಿಯ ಎಲ್ಲಾ ಸದಸ್ಯರುಗಳ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೂವಣ್ಣ ತಿಳಿಸಿದರು.

ABOUT THE AUTHOR

...view details