ಕರ್ನಾಟಕ

karnataka

ETV Bharat / state

ಕಳಪೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ: ಪರಿಹಾರಕ್ಕೆ ಕಾಂಗ್ರೆಸ್​ ಮುಖಂಡ ಆಗ್ರಹ

ಮುಖ್ಯ ಬೆಳೆಗಳಲ್ಲಿ ಒಂದಾದ ಆಲೂಗಡ್ಡೆಯನ್ನು ಈ ವರ್ಷವೂ ಹಾಸನದ ರೈತರು ಬೆಳೆಯುತ್ತಿದ್ದಾರೆ. ಆದರೆ, ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ್ದರಿಂದ ಆಲೂಗಡ್ಡೆ ಮಣ್ಣಿನಲ್ಲೇ ಕರಗುತ್ತಿದೆ. ಹಾಗಾಗಿ ಸರ್ಕಾರದಿಂದ ರೈತರಿಗೆ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್
ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್

By

Published : May 29, 2020, 8:57 PM IST

ಹಾಸನ:ಕಳಪೆ ಬಿತ್ತನೆ ಬೀಜದಿಂದ ಮಣ್ಣಿನಲ್ಲೇ ಆಲೂಗಡ್ಡೆ ಕರಗುತ್ತಿದೆ. ಜಿಲ್ಲಾಡಳಿತ ಒಂದು ತಂಡ ರಚಿಸಿ ಮಾಹಿತಿ ಪಡೆದು, ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಆಗ್ರಹಿಸಿದರು.

​ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಮಳೆ ಉತ್ತಮವಾಗಿ ಬರುತ್ತಿದೆ. ಮುಖ್ಯ ಬೆಳೆಗಳಲ್ಲಿ ಒಂದಾದ ಆಲೂಗಡ್ಡೆಯನ್ನು ರೈತರು ಈ ವರ್ಷವು ಬೆಳೆಯುತ್ತಿದ್ದಾರೆ. ಪ್ರತಿ ವರ್ಷದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಸಭೆಯನ್ನು ಕರೆಯಬೇಕು. ಆಲೂಗಡ್ಡೆ ಬಿತ್ತನೆ ಬೀಜ ಸರ್ಟಿಫೈಡ್ ಆಗಿದೆಯಾ, ಬೆಳೆಯುವುದರಿಂದ ರೈತರಿಗೆ ಅನುಕೂಲವಾಗುತ್ತಾ, ಈ ಬಿತ್ತನೆ ಬೀಜ ಕಳಪೆಯಾ ಎಂಬುದರ ಬಗ್ಗೆ ಚರ್ಚಿಸಬೇಕು. ಆಲೂಗಡ್ಡೆ ವ್ಯಾಪಾರ ಮಾಡುವ ವರ್ತಕರು ರೈತರಿಗೆ ಹೆಚ್ಚಿನ ಒತ್ತಡ ಹಾಕಿ ಬೀಜ​ ಖರೀದಿಸುವುದರಿಂದ ಬೆಲೆ ನಿಗಧಿಯನ್ನು ಕೂಡ ಮಾಡಬೇಕು ಎಂದರು.

ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್

ವರ್ತಕರು ಉತ್ತಮ ಗುಣಮಟ್ಟದ ಆಲೂಗಡ್ಡೆ ಬೀಜ ಎಂದು ಹೇಳಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ. ಆಲೂಗೆಡ್ಡೆ ಬಿತ್ತನೆ ಮಾಡಿ ಈಗಾಗಲೇ 22 ದಿನಗಳು ಕಳೆದಿದ್ದರೂ ಸರಿಯಾಗಿ ಆಲೂಗಡ್ಡೆ ಬಂದಿರುವುದಿಲ್ಲ. ಭೂಮಿಯಲ್ಲೆ ಕರಗುತ್ತಿದೆ. ಬೈಲಹಳ್ಳಿ ಒಂದು ಪಂಚಾಯಿತಿ ವ್ಯಾಪ್ತಿಯಲ್ಲೆ 80 ಎಕರೆಗೂ ಹೆಚ್ಚು ಆಲೂಗಡ್ಡೆ ಕರಗಿದ್ದು, ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ಕಳೆದ ಬಾರಿಯ ಆಲೂಗಡ್ಡೆ ಬೆಳೆಗೆ ಸಬ್ಸಿಡಿ ಕೊಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿರುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. ಇದುವರೆಗೂ ಯಾವ ಸಬ್ಸಿಡಿ ಬಂದಿಲ್ಲ. ಇದಕ್ಕೆ ಹೊಣೆ ಯಾರು? ಒಂದು ಎಕರೆಯಲ್ಲಿ ರೈತ ಆಲೂಗಡ್ಡೆ ಬೆಳೆಯಬೇಕಾದರೇ ಕನಿಷ್ಠ 25 ಸಾವಿರ ರೂ. ಖರ್ಚಾಗುತ್ತದೆ. ಈ ವರ್ಷ ಮಳೆ ಉತ್ತಮವಾಗಿ ಆಗಿದ್ದರೂ ಕಳಪೆ ಬೀಜಕ್ಕೆ ರೈತರು ನಷ್ಟ ಅನುಭವಿಸಬೇಕಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಮಾರುಕಟ್ಟೆಯಲ್ಲಿ 3 ಲಕ್ಷ ಚೀಲ ಬಿತ್ತನೆ ಆಲೂಗಡ್ಡೆ ವ್ಯಾಪಾರವಾಗಿದೆ. ಜಿಲ್ಲಾಡಳಿತ ಕಣ್ಣುಮುಚ್ಚಿಕೊಳ್ಳದೆ ತೋಟಗಾರಿಕೆ ಇಲಾಖೆಯಲ್ಲಿ ಒಂದು ತಂಡ ರಚನೆ ಮಾಡಲಿ. ಜೊತೆಗೆ ಜಿಲ್ಲಾಧಿಕಾರಿಗಳು ಹೋಗಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಿ ಎಂದು ಒತ್ತಾಯಿಸಿದರು.

ABOUT THE AUTHOR

...view details