ಕರ್ನಾಟಕ

karnataka

ETV Bharat / state

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪು: ಸಂಸದ ಪ್ರಜ್ವಲ್ ರೇವಣ್ಣ - ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪು:ಸಂಸದ ಪ್ರಜ್ವಲ್ ರೇವಣ್ಣ

ಕೊರೊನಾ ಕಡಿಮೆಯಾದ ಬಳಿಕ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿನ ಸಮಸ್ಯೆ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

sd
ಸಂಸದ ಪ್ರಜ್ವಲ್ ರೇವಣ್ಣ

By

Published : May 30, 2020, 4:37 PM IST

ಹಾಸನ:ಜಿಲ್ಲೆಯಲ್ಲಿ ಯಾವ ಪ್ರತಿಷ್ಟೆ ಇಲ್ಲ. ರಾಜಕೀಯದಲ್ಲಿ ಅದೆಲ್ಲ ಇರುತ್ತದೆ, ಕೆಲಸ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಜಿಲ್ಲಾ ಪಂಚಾಯತಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಏನಾದರೂ ಭಿನ್ನಾಭಿಪ್ರಾಯ ಬಂದಿದ್ದರೆ ನಾನು ಸಂಸದನಾಗಿ ಎಲ್ಲರನ್ನೂ ಕರೆದು ಮಾತನಾಡಿ ಹೊಂದಾಣಿಕೆಯಿಂದ ಹೋಗಿ ಎಂದು ಹೇಳುತ್ತೇನೆ. ಏನೇ ಗಲಾಟೆ ಮಾಡಿಕೊಂಡರು ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ಕೋರೊಮ್‌ ಅನುಮೋದನೆ ಇಲ್ಲದೆ ಕ್ರಿಯಾ ಯೋಜನೆ ತೆಗೆದುಕೊಳ್ಳುವುದು ಕಾನೂನು ಬಾಹಿರವಾಗಿರುತ್ತದೆ. ಕ್ರೀಯಾ ಯೋಜನೆ ಮಾಡಿರುವುದು ನನ್ನ ಗಮನಕ್ಕೆ ಬಂದರೆ ಅದನ್ನು ದಿಶಾ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇನೆ ಎಂದರು.

ಸಂಸದ ಪ್ರಜ್ವಲ್ ರೇವಣ್ಣ

ಮನ್ರೇಗಾ ಮತ್ತು ಎನ್‌ಆರ್‌ಐಜಿಯಲ್ಲಿ ಎಷ್ಟು ಕೆಲಸ ನಡೆದಿದೆ. ಅಲ್ಲದೆ ಈ ಬಗ್ಗೆ ಕೇಳಿ ಬಂದಿರುವ ಕೆಲವು ದೂರುಗಳನ್ನು ಬಗೆಹರಿಸಲಾಗುವುದು ಎಂದರು. ಕೊರೊನಾ ಲಾಕ್‌ಡೌನ್ ಇದ್ದರೂ ಯಾವುದೇ ಕೆಲಸ ನಿಲ್ಲಿಸಿಲ್ಲ. ನಮಗೆ ಕೇಂದ್ರ ಸರ್ಕಾರದ ಯೋಜನೆ ನಿಲ್ಲಿಸಿ ಎಂದಾಗಲಿ, ಎಫ್‌ಡಿಯಲ್ಲಿ ಅನುಮೋದನೆ ಪಡೆಯಬೇಕು ಎಂದಾಗಲಿ ಒತ್ತಡ ಹೇರಿಲ್ಲ ಎಂದರು.

ABOUT THE AUTHOR

...view details