ಹಾಸನ: ನಾನು ಭ್ರಷ್ಟಚಾರ ಮಾಡಿರುವ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಹಿರಂಗ ಸವಾಲು ಹಾಕಿದ್ದಾರೆ.
ನಾನು ಭ್ರಷ್ಟಚಾರಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ .. ಮಾಜಿ ಸಚಿವ ಹೆಚ್ ಡಿ ರೇವಣ್ಣ - ಭ್ರಷ್ಟಚಾರಿ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ:ಮಾಜಿ ಸಚಿವ ರೇವಣ್ಣ
ಒಂದೊಂದು ಅಧಿಕಾರಿಗಳ ವರ್ಗಾವಣೆಗೆ ಎಷ್ಟೆಷ್ಟು ಹಣ ಪಡೆದಿದ್ದಾರೆಂದು ಗೊತ್ತು. ವಿಧಾನಸಭೆ ಅಧಿವೇಶನ ಕರೆಯಲಿ ದಾಖಲೆ ಸಮೇತ ಭ್ರಷ್ಟಚಾರದ ಬಗ್ಗೆ ಎಳೆ ಎಳೆಯಾಗಿ ಇಡುವೆ. ಇಂತಹ ಹೇಳಿಕೆ ಕೊಡುವ ಮೊದಲು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು..
![ನಾನು ಭ್ರಷ್ಟಚಾರಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ .. ಮಾಜಿ ಸಚಿವ ಹೆಚ್ ಡಿ ರೇವಣ್ಣ dsds](https://etvbharatimages.akamaized.net/etvbharat/prod-images/768-512-8221361-thumbnail-3x2-vish.jpg)
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ನಾನು ಭ್ರಷ್ಟಚಾರ ಮಾಡಿರುವುದಾಗಿ ಈಶ್ವರಪ್ಪನವರು ಮಾತನಾಡಿದ್ದಾರೆ. ಯಡಿಯೂರಪ್ಪನವರ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಚಾರದ ಬಗ್ಗೆ ನಾನು ಒಂದೊಂದಾಗಿ ದಾಖಲೆ ಬಿಚ್ಚಿಡುತ್ತೇನೆ. ಸಮಯ ಬಂದಾಗ ಹೇಳುತ್ತೇನೆ. ಒಂದೊಂದು ಅಧಿಕಾರಿಗಳ ವರ್ಗಾವಣೆಗೆ ಎಷ್ಟೆಷ್ಟು ಹಣ ಪಡೆದಿದ್ದಾರೆಂದು ಗೊತ್ತು. ವಿಧಾನಸಭೆ ಅಧಿವೇಶನ ಕರೆಯಲಿ ದಾಖಲೆ ಸಮೇತ ಭ್ರಷ್ಟಚಾರದ ಬಗ್ಗೆ ಎಳೆ ಎಳೆಯಾಗಿ ಇಡುವೆ. ಇಂತಹ ಹೇಳಿಕೆ ಕೊಡುವ ಮೊದಲು ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಈಶ್ವರಪ್ಪನವರಿಗೆ ಗೌರವ ಇದ್ದರೆ ದಾಖಲೆ ಸಮೇತ ಹೇಳಿಕೆ ಕೊಡಲಿ.
ಇಡೀ ದೇಶದಲ್ಲಿ ಬ್ರಿಟಿಷ್ ಸರ್ಕಾರ ಆಡಳಿತದಲ್ಲಿದ್ದು, ರಾಜ್ಯ ಸರ್ಕಾರದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಅಂದು ಗಾಂಧೀಜಿಯವರು ಹೋರಾಡಿ ದೇಶದಿಂದ ಬ್ರಿಟಿಷರನ್ನ ಓಡಿಸಿದಂತೆ ನಾವು ಬಿಜೆಪಿ ಸರ್ಕಾರವನ್ನ ತೆಗೆಯಲೇಬೇಕು. ರಾಜ್ಯ ಸರ್ಕಾರಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ನನ್ನ ಬಗ್ಗೆ ಮಾತನಾಡಿದ್ರೆ ನಾನು ಸುಮ್ಮನೆ ಕೂರುವವನಲ್ಲ, ಎಲ್ಲವನ್ನ ಎಳೆ ಎಳೆಯಾಗಿ ಸಂದರ್ಭ ಬಂದಾಗ ಬಿಚ್ಚಿಡಬೇಕಾಗುತ್ತದೆ. ಇಡೀ ರಾಜ್ಯದಲ್ಲಿ ನಗರಸಭೆ, ಪುರಸಭೆ ಚುನಾವಣೆ ನಡೆದು ಎರಡು ವರ್ಷಗಳಾದ್ರೂ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ ಅಂದ್ರೆ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.