ಹಾಸನ:(ಅರಕಲಗೂಡು): ತಾಲೂಕಿನ ಕೊಣನೂರು ಸಮೀಪದ ಹೊಡೇನೂರು ಗ್ರಾಮದಲ್ಲಿ ಬೆಳೆಯಲಾಗಿದ್ದ 15 ಲಕ್ಷ ರೂ. ಮೌಲ್ಯದ 70 ಕೆಜಿ ತೂಕದ ಗಾಂಜಾ ಗಿಡಗಳನ್ನು ಅಬಕಾರಿ ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಅರಕಲಗೂಡಿನಲ್ಲಿ 70 ಕೆಜಿ ಗಾಂಜಾ ಗಿಡ ಸೀಜ್: ಮೂವರ ಬಂಧನ - ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಲ್ಲೂರು
ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 70 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ.
ಅರಕಲಗೂಡಿನಲ್ಲಿ 70 ಕೆಜಿ ಗಾಂಜಾ ಸೀಜ್
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮೇಶ್, ಪ್ರಕಾಶ್ ಮತ್ತು ದೇವರಾಜ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿ ಸೋಮೇಶ್ ಜಮೀನಿನಲ್ಲಿ ಶುಂಠಿ ಮತ್ತು ಕೆಸುವಿನ ನಡುವೆ ಬೆಳೆದಿದ್ದ 60 ಕೆಜಿ, ಜೋಳದ ಗಿಡಗಳ ಮಧ್ಯೆ ಪ್ರಕಾಶ್ ಬೆಳೆದಿದ್ದ 10 ಕೆಜಿ ಹಾಗೂ ದೇವರಾಜ್ ಮನೆಯಲ್ಲಿ ಸಂಗ್ರಹಿಸಿದ್ದ 550 ಗ್ರಾಂ ಸೇರಿ 70 ಕೆಜಿಯಷ್ಟು ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ.
ಈ ಗಾಂಜಾವನ್ನು ಕೇರಳ ಮತ್ತು ಮೈಸೂರಿಗೆ ರವಾನಿಸಲು ಸಿದ್ಧತೆ ನಡೆಸಿದ್ದ ವೇಳೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
Last Updated : Sep 10, 2020, 2:36 PM IST