ಕರ್ನಾಟಕ

karnataka

ETV Bharat / state

ಅಪಹರಣಕ್ಕೊಳಗಾಗಿದ್ದ ಕೇರಳ ವ್ಯಕ್ತಿಯನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು: ವಿಡಿಯೋ - kidnaped person rescued

ಅನ್ವರ್ ಎಂಬ ವ್ಯಕ್ತಿಯನ್ನು ಅಪಹರಣ ಮಾಡಿದ ಗ್ಯಾಂಗ್​ನಿಂದ ಹಾಸನ ಜಿಲ್ಲಾ ಪೊಲೀಸರು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿರುವ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಪಹರಣಕಾರರಿಂದ ಕೇರಳ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು
ಅಪಹರಣಕಾರರಿಂದ ಕೇರಳ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

By

Published : Jul 29, 2021, 4:12 AM IST

Updated : Jul 29, 2021, 7:59 AM IST

ಹಾಸನ/ಗೊರೂರು: ಕೇರಳದಲ್ಲಿ ಅಪಹರಣವಾಗಿದ್ದ ವ್ಯಕ್ತಿಯನ್ನು ಕರ್ನಾಟಕದ ಖಾಕಿ ಪಡೆ ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ರೋಚಕ ಘಟನೆ ಹಾಸನದಲ್ಲಿ ನಡೆದಿದೆ. ಅನ್ವರ್ (33) ಅಪಹರಿಸಲ್ಪಟ್ಟಿದ್ದ ವ್ಯಕ್ತಿಯಾಗಿದ್ದು, ಈತನನ್ನು ಹಾಸನ ಜಿಲ್ಲಾ ಪೊಲೀಸರು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿರುವ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಕೇರಳದ ಕಾಸರಗೋಡಿನಲ್ಲಿ ಅನ್ವರ್ ಎಂಬಾತನನ್ನು ಹಣದ ವಿಷಯದಲ್ಲಿ ದುಷ್ಕರ್ಮಿಗಳು ಕಿಡ್ನಾಪ್ ಮಾಡಿದ್ದರು. ಕಾಸರಗೋಡು ಮಾರ್ಗವಾಗಿ ಅವರು ಕರ್ನಾಟಕ ಗಡಿಭಾಗಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಪಡೆದ ಹಾಸನ ಜಿಲ್ಲಾ ಪೊಲೀಸರು ಅನ್ವರ್ ರಕ್ಷಣೆಗೆ ಕಾರ್ಯಪ್ರವೃತ್ತರಾಗಿದ್ದರು.

ಹಾಸನ ಪೊಲೀಸರಿಂದ ಅಪಹರಕ್ಕೊಳಗಾಗಿದ್ದ ಕೇರಳ ವ್ಯಕ್ತಿ ರಕ್ಷಣೆ
ಬುಧವಾರ ಬೆಳಗ್ಗೆಯಿಂದಲೇ ಸಕಲೇಶಪುರ ಅರಕಲಗೂಡು ಹಾಗೂ ಗೊರೂರು ಪೊಲೀಸರು ದುಷ್ಕರ್ಮಿಗಳ ಕಾರು ಬರುವಿಕೆಗಾಗಿ ಕಾಯುತ್ತಿದ್ದರು.ಅರಕಲಗೂಡಿನಿಂದ ಗೊರೂರು ಪಟ್ಟಣಕ್ಕೆ ಕಾರು ಬರುತ್ತಿದ್ದಂತೆ ಖಾಕಿ ಪಡೆ ರಸ್ತೆಗೆ ಅಡ್ಡಲಾಗಿ ಲಾರಿ ಮತ್ತು ಜೆಸಿಬಿ ನಿಲ್ಲಿಸಿ ಆರೋಪಿಗಳನ್ನು ಸದೆಬಡಿಯಲು ಯೋಜನೆ ರೂಪಿಸಿಕೊಂಡಿದ್ದಾರೆ. ಇತ್ತ ಕಾರು ಬರುತ್ತಿದ್ದಂತೆ ತಡೆದು ಅಪಹರಣಕ್ಕೊಳಗಾದ ಅನ್ವರ್ ರಕ್ಷಣೆ ಮಾಡಲು ಪೊಲೀಸರ ಮುಂದಾಗಿದ್ದಾರೆ.

ಆದರೆ, ಅಪಹರಣಕಾರರು ಪೊಲೀಸರ ಮೇಲೆಯೇ ಕಾರನ್ನು ಹತ್ತಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ನಡುವೆಯೂ ಪೊಲೀಸರು ತಮ್ಮ ಪ್ರಾಣದ ಹಂಗು ತೆರದು ಅನ್ವರ್​ನನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಪಹರಣಕಾರರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.ಈ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ.

Last Updated : Jul 29, 2021, 7:59 AM IST

ABOUT THE AUTHOR

...view details