ಹಾಸನ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರು ತಾವೇ ಸ್ವತಃ ಹೈಜಂಪ್ ಮಾಡುವುದರ ಮೂಲಕ ನೂರಾರು ಮಂದಿ ಪೊಲೀಸ್ ಆಕಾಂಕ್ಷಿಗಳಿಗೆ ಧೈರ್ಯ ತುಂಬಿ ಸ್ಪೂರ್ತಿ ನೀಡಿದ ಅಪರೂಪದ ಪ್ರಸಂಗ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ.
ಹಾಸನದಲ್ಲಿ ಪೊಲೀಸ್ ನೇಮಕ ಪರೀಕ್ಷೆ... ಸ್ವತಃ ತಾವೇ ಹೈ ಜಂಪ್ ಮಾಡಿ ತೋರಿಸಿದ ಎಸ್ಪಿ - ಹಾಸನದಲ್ಲಿ ಪೊಲೀಸ್ ನೇಮಕಾತಿ
ಹಾಸನದಲ್ಲಿ ಪೊಲೀಸ್ ನೇಮಕಾತಿ ರ‍್ಯಾಲಿಗೆ ಆಗಮಿಸಿದ್ದ ನೂರಾರು ಮಂದಿಯ ದೈಹಿಕ ಪರೀಕ್ಷೆ, ರನ್ನಿಂಗ್ ರೇಸ್ ಸೇರಿದಂತೆ ನಾನಾ ಪರೀಕ್ಷೆಗಳನ್ನು ನಡೆಸಲಾಯಿತು.
![ಹಾಸನದಲ್ಲಿ ಪೊಲೀಸ್ ನೇಮಕ ಪರೀಕ್ಷೆ... ಸ್ವತಃ ತಾವೇ ಹೈ ಜಂಪ್ ಮಾಡಿ ತೋರಿಸಿದ ಎಸ್ಪಿ Hassan](https://etvbharatimages.akamaized.net/etvbharat/prod-images/768-512-6456893-thumbnail-3x2-hsn.jpg)
ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಪೊಲೀಸ್ ನೇಮಕಾತಿ ರ‍್ಯಾಲಿಗೆ ಆಗಮಿಸಿದ್ದ ನೂರಾರು ಮಂದಿಯ ದೈಹಿಕ ಪರೀಕ್ಷೆ, ರನ್ನಿಂಗ್ ರೇಸ್ ಸೇರಿದಂತೆ ನಾನಾ ಪರೀಕ್ಷೆಗಳನ್ನು ನಡೆಸಲಾಯಿತು.
ಈ ವೇಳೆ ಸ್ಥಳದಲ್ಲಿದ್ದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರು ಪೊಲೀಸ್ ಆಯ್ಕೆಗಾಗಿ ಹಾಕಲಾಗಿದ್ದ 5 ಅಡಿ ಜಂಪನ್ನು ಮೊದಲು ತಾವೇ ಎತ್ತರಕ್ಕೆ ಜಿಗಿಯುವ ಮೂಲಕ ಪೊಲೀಸ್ ಆಯ್ಕೆಗೆ ಪಾಲ್ಗೊಂಡಿದ್ದವರಿಗೆ ಹುರಿದುಂಬಿಸಿದರು. ಎಸ್ಪಿಯವರು ಹೈಜಂಪ್ ಮಾಡಿದ ವಿಡಿಯೋ ಈಗಾಗಲೇ ಎಲ್ಲೆಡೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ಸದ್ದು ಮಾಡುತ್ತಿದೆ.
ಹಾಸನದಲ್ಲಿ ಪೊಲೀಸ್ ನೇಮಕಾತಿ ಟ್ರೈನಿಂಗ್
Last Updated : Mar 19, 2020, 1:35 PM IST