ಬೇಲೂರು (ಹಾಸನ): ಹಾಸನದ ಬೇಲೂರು ಪೊಲೀಸ್ ಠಾಣೆ ಸಿಬ್ಬಂದಿ ಜಾನುವಾರುಗಳನ್ನು ಬಂಧಿಸಿ ಸುದ್ದಿಯಾಗಿದ್ದಾರೆ. ಕೇಳೋಕೆ ವಿಚಿತ್ರ ಅನ್ನಿಸಿದ್ರು ಇದು ಸತ್ಯ. ಕೊನೆಗೆ, ಯಾಕಾದ್ರೂ ಈ ಕೆಲಸ ಮಾಡಿದ್ವಪ್ಪಾ ಎಂದು ಪೊಲೀಸರು ಪೇಚಿಗೂ ಸಿಲುಕಿದ್ರು.
ಬೇಲೂರು ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಬೇಲೂರು ನೆಹರು ನಿವಾಸಿಗಳಾದ ಸಿದ್ದಮ್ಮ ಮತ್ತು ನಿಂಗಮ್ಮರ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನು ಮೇಯ್ದಿವೆ. ಇದರಿಂದ ಕೆರಳಿದ ಠಾಣಾ ಸಿಬ್ಬಂದಿ ಸಿಪಿಐ ಯೋಗೀಶ್ ಆದೇಶದಂತೆ ಹಸುಗಳನ್ನು ಬಿಡದಂತೆ ಠಾಣೆ ಬಳಿಯಲ್ಲೇ ಕಟ್ಟಿ ಹಾಕಿದ್ದಾರೆ. ವೃದ್ಧೆಯರಿಬ್ಬರು ಹಸುಗಳನ್ನು ಬಿಡಿ ಎಂದು ಬೇಡಿಕೊಂಡರೂ ಪೊಲೀಸರು ಬಿಟ್ಟುಕೊಟ್ಟಿಲ್ಲ.