ಕರ್ನಾಟಕ

karnataka

ETV Bharat / state

ಜಾತ್ರೆ ,ಸಂತೆ,ಹಬ್ಬ ಹರಿದಿನಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅಂದರ್​ - chain snatchers

ಜಾತ್ರೆ , ಸಂತೆ ,ಹಬ್ಬ ಹರಿದಿನಗಳ ಜನಜಂಗುಳಿ ನಡೆಯುತ್ತಿದ್ದ ಪ್ರದೇಶಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಸರಗಳ್ಳತನ

By

Published : Mar 16, 2019, 7:49 AM IST

ಹಾಸನ/ಬೇಲೂರು: ಜಾತ್ರೆ , ಸಂತೆ, ಹಬ್ಬ ಹರಿದಿನಗಳ ಜನಜಂಗುಳಿ ನಡೆಯುತ್ತಿದ್ದ ಪ್ರದೇಶಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಹುಣಸೂರಿನ ಪ್ರಿಯಾ, ಆನೇಕಲ್‌ನ ಆಶಾ, ಅತ್ತಿಬೆಲೆಯ ಸೋಮಶೇಖರ್, ಹುಣಸೂರಿನ ವಿನೋಭಾ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 2.75 ಲಕ್ಷ ಮೌಲ್ಯದ 120 ಗ್ರಾಂ ಚಿನ್ನ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಇನೋವಾ ಕಾರು ಸೇರಿದಂತೆ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.




ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜಾತ್ರೆ , ಸಂತೆ, ಹಬ್ಬ ಹರಿದಿನಗಳ ಜನಜಂಗುಳಿ ಪ್ರದೇಶಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು. ಇವರ ಮೇಲೆ ಹಳೇಬೀಡು, ಅರಸೀಕೆರೆ, ಸಕಲೇಶಪುರ, ಹಾಸನ ಸೇರಿದಂತೆ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೇಲೂರು ವೃತ್ತ ನಿರೀಕ್ಷಕ ಲೋಕೇಶ್ ತಿಳಿಸಿದರು.

ABOUT THE AUTHOR

...view details