ಕರ್ನಾಟಕ

karnataka

ETV Bharat / state

ದಯಮಾಡಿ ಚಿಕಿತ್ಸೆಗೆ ಸಹಾಯ ಮಾಡಿ.. ಪತಿಗಾಗಿ ಅಂಗಲಾಚುತ್ತಿರುವ ಪತ್ನಿ - ಚಿಕಿತ್ಸೆಗೆ ಸಹಾಯ ಮಾಡಿ

ಜಿಲ್ಲೆಯ ಅರಸೀಕೆರೆ ತಾಲೂಕಿನ ಕೆಂಕೆರೆ ಗ್ರಾಮದ ಗುರುಲಿಂಗಪ್ಪ ಔಷಧಕಕ್ಕಾಗಿ ಪರದಾಡುತ್ತಿದ್ದಾರೆ. ಈತನ ಪತ್ನಿ ಟೈಲರ್ ಕೆಲಸ ಮಾಡಿಕೊಂಡು ಇಷ್ಟು ದಿನ ತನ್ನ ಪತಿಗೆ ಔಷಧ ಕೊಡಿಸುತ್ತಿದ್ದರು. ಇದೀಗ ಲಾಕ್​ಡೌನ್​ ಆದ್ದರಿಂದ ಕುಟುಂಬ ಕೆಲಸವಿಲ್ಲದೇ ಕಂಗಾಲಾಗಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ದಂಪತಿ
ದಂಪತಿ

By

Published : Jun 3, 2021, 8:13 PM IST

ಹಾಸನ: ಲಾಕ್​ಡೌನ್ ಹಿನ್ನಲೆ ಕೆಲಸವಿಲ್ಲದೇ ಪತಿಗೆ ಡಯಾಲಿಸಿಸ್ ಮಾಡಿಸೋಕೂ ಹಣವಿಲ್ಲವೆಂದು ದಂಪತಿಯೊಬ್ಬರು ಧನ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ಜಿಲ್ಲೆಯ ಅರಸೀಕೆರೆ ತಾಲೂಕಿನ ಕೆಂಕೆರೆ ಗ್ರಾಮದ ಗುರುಲಿಂಗಪ್ಪ ಔಷಧಿಗಾಗಿ ಪರದಾಡುತ್ತಿದ್ದಾರೆ. ಈತನ ಪತ್ನಿ ಟೈಲರ್ ಕೆಲಸ ಮಾಡಿಕೊಂಡು ಇಷ್ಟು ದಿನ ತನ್ನ ಪತಿಗೆ ಔಷಧ ಕೊಡಿಸುತ್ತಿದ್ದರು. ಇದೀಗ ಲಾಕ್​ಡೌನ್​ ಆದ್ದರಿಂದ ಕುಟುಂಬ ಕೆಲಸವಿಲ್ಲದೇ ಕಂಗಾಲಾಗಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ವೈರಲ್​ ವಿಡಿಯೋ

ನಾಲ್ಕು ವರ್ಷದ ಹಿಂದೆ ಮರದಿಂದ ಬಿದ್ದು ಗುರುಲಿಂಗಪ್ಪನಿಗೆ ಬೆನ್ನು ಮೂಳೆ ಮುರಿದಿತ್ತು. ಬಳಿಕ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲು ಪರದಾಡುತ್ತಿದ್ದು, ದಯಮಾಡಿ ನಮಗೆ ಚಿಕಿತ್ಸೆಗೆ ಸಹಾಯಮಾಡಿ. ನಮಗೆ ಒಂದು ಕೆಲಸ ಕೊಟ್ಟರು ಪರವಾಗಿಲ್ಲ, ದುಡಿದು ನಿಮ್ಮ ಹಣ ತೀರಿಸುತ್ತೇವೆ ಎಂದು ದಂಪತಿ ಅಂಗಲಾಚುತ್ತಿದ್ದಾರೆ.

ABOUT THE AUTHOR

...view details