ಬೇಲೂರು(ಹಾಸನ):ಪರಿಸರವನ್ನು ಮನುಕುಲ ಅವಲಂಬಿಸಿದೆ. ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ಮಾತ್ರ ಮನುಕುಲ ಅಭಿವೃದ್ಧಿಯಾಗಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಲೂರಿನ ಪ್ರಾಂಶುಪಾಲ ಪುಟ್ಟರಾಜು ಅಭಿಪ್ರಾಯಪಟ್ಟರು.
ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮನುಕುಲದ ಉಳಿವಿಗೆ ಮರವೇ ಆಧಾರ. ಅವುಗಳಿಲ್ಲದೇ ಯಾವ ಜೀವ ಸಂಕುಲವು ಉಳಿಯದು. ನಮ್ಮ ದೇಹಕ್ಕೆ ಉಸಿರನ್ನ ಒದಗಿಸುವ ಗಿಡಮರಗಳನ್ನ ಕಡಿಯುವ ಬದಲು ಕಾಪಾಡಬೇಕಿದೆ. ಅಲ್ಲದೇ ಪ್ರತಿಯೊಬ್ಬರು ತಮ್ಮ ಮನೆಯ ಮುಂಭಾಗ ಕನಿಷ್ಠ ಒಂದು ಗಿಡ ನೆಟ್ಟು ಪೋಷಣೆ ಮಾಡಿ. ಗಿಡ ನೆಡುವುದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅವುಗಳನ್ನು ಪೋಷಿಸುವ ಕೆಲಸವೂ ಆಗಬೇಕಿದೆ ಎಂದರು.