ಹಾಸನ: ಪೈಪ್ಲೈನ್ ಕೊರೆದು ಪೆಟ್ರೋಲ್ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೈಪ್ಲೈನ್ ಕೊರೆದು ಪೆಟ್ರೋಲ್ ಕದಿಯುತ್ತಿದ್ದ ಆರೋಪಿಗಳ ಬಂಧನ - ಹಾಸನ ಪೆಟ್ರೋಲ್ ಕಳ್ಳರ ಬಂಧನ
ಮಂಗಳೂರಿನಿಂದ ಹಾಸನ ನಗರಕ್ಕೆ ಸಂಪರ್ಕಿಸಿರುವ ಪೆಟ್ರೋಲ್ ಪಂಪ್ ಕೊರೆದು ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲ್ ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ಪೊಲೀಸ್
ತಾಲೂಕಿನ ಕಂದಲಿ ಸಮೀಪ ಮಂಗಳೂರಿನಿಂದ ಹಾಸನಕ್ಕೆ ಸಂಪರ್ಕಿಸುವ ಪೆಟ್ರೋಲ್ ಪೈಪ್ಲೈನ್ನ 155ನೇ ಕಿ.ಮೀ. ಮಧ್ಯದಲ್ಲಿರುವ ಪೈಪ್ ಕೊರೆದು ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹಾಸನ ನಗರ ಪೊಲೀಸರು, ಪೆಟ್ರೋಲ್ ಪೈಪ್ ಮೂಲಕ ಖಾಸಗಿ ವಾಹನಕ್ಕೆ ಪೆಟ್ರೋಲ್ ತುಂಬಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಅಬ್ದುಲ್ ಹಕೀಮ್ ಮತ್ತು ನೆಹರು ನಗರದ ಅಬ್ದುಲ್ ರೆಹಮಾನ್ ಎಂಬುವವರನ್ನು ಬಂಧಿಸಿದ್ದಾರೆ.