ಕರ್ನಾಟಕ

karnataka

ETV Bharat / state

ಕೊರೊನಾತಂಕ: ಅನುಮಾನಾಸ್ಪದ ವ್ಯಕ್ತಿ ಸರ್ಕಾರಿ ಆಸ್ಪತ್ರೆಗೆ ರವಾನೆ - latest corona news

ಅರಳೇಪೇಟೆ ರಸ್ತೆಯ ಮನೆಯೊಂದರ ಮುಂದೆ ಅಪರಿಚಿತ ವ್ಯಕ್ತಿ ಮಲಗಿದ್ದು, ರಾತ್ರಿ ವೇಳೆ ಅಕ್ಕ-ಪಕ್ಕದ ಮನೆ ಬಾಗಿಲು ಬಡಿದು ಭಯ ಉಂಟು ಮಾಡಿದ್ದಾನೆ. ಬೆಳಗ್ಗೆದ್ದು ಅಲ್ಲಿಂದ ತೆರಳುವಂತೆ ಹೇಳಿದರೂ ಆತ ಹೋಗುವುದಿಲ್ಲ ಎಂದು ಮನೆ ಮಾಲೀಕರಿಗೆ ಗದರಿಸಿದ್ದಾನೆ ಎಂಬ ಮಾಹಿತಿ ಇದೆ.

hassan
ಅನುಮಾನಾಸ್ಪದ ವ್ಯಕ್ತಿ ಸರ್ಕಾರಿ ಆಸ್ಪತ್ರೆಗೆ

By

Published : Jul 14, 2020, 5:20 PM IST

ಹಾಸನ : ನಗರದ ಅರಳೇಪೇಟೆ ರಸ್ತೆ ಬದಿಯಲ್ಲಿ ಅಸ್ವಸ್ಥನಾಗಿ ನರಳುತ್ತಿದ್ದ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಆ್ಯಂಬುಲೆನ್ಸ್​​ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಅರಳೇಪೇಟೆ ರಸ್ತೆಯ ಮನೆಯೊಂದರ ಮುಂದೆ ಅಪರಿಚಿತ ವ್ಯಕ್ತಿ ಮಲಗಿದ್ದು, ರಾತ್ರಿ ವೇಳೆ ಅಕ್ಕಪಕ್ಕದ ಮನೆ ಬಾಗಿಲು ಬಡಿದು ಆಂತಕ ಸೃಷ್ಟಿಸಿದ್ದಾನೆ. ಬೆಳಗ್ಗೆದ್ದು ಹೋಗುವಂತೆ ಹೇಳಿದರೂ ಆತ ತಾನು ಹೋಗುವುದಿಲ್ಲ ಎಂದು ಮನೆ ಮಾಲೀಕರಿಗೆ ಗದರಿಸಿದ್ದಾನೆ ಎನ್ನಲಾಗಿದೆ.

ಈತನ ಪೂರ್ವಾಪರ ವಿಚಾರಿಸಿದ ಸ್ಥಳೀಯರು ಮಾನಸಿಕ ಅಸ್ವಸ್ಥನಿರಬಹುದು ಎಂದು ಅಂದಾಜಿಸಿ ಆ್ಯಂಬುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈತನ ಬಳಿ ಬೆಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಕೆಲ ಮಾಹಿತಿಯೂ ಲಭ್ಯವಾಗಿದೆ.

ಇಂದಿನಿಂದ ಬೆಂಗಳೂರು ಲಾಕ್‌ ಡೌನ್ ಇರುವುದರಿಂದ ತಪ್ಪಿಸಿಕೊಂಡು ಬಂದಿರಬಹುದೇ?. ಅಥವಾ ಕೊರೊನಾದಿಂದ ನರಳುತ್ತಿರಬಹುದೇ ಎಂಬ ಅನುಮಾನಗಳು ಜನರನ್ನು ಕಾಡತೊಡಗಿದೆ.

ABOUT THE AUTHOR

...view details