ಹಾಸನ: ಎಲ್ಲರೂ ಕೊರೊನಾಗೆ ಚಿಕಿತ್ಸೆಬೇಕು ಅಂತಾ ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಂತರೆ ಇತ್ತ ಹಾಸನದಲ್ಲಿ ಎಣ್ಣೆ ಅಂಗಡಿಗಾಗಿ ಪುರುಷರು ಹೊರಾಟಕ್ಕಿಳಿದಿದ್ದಾರೆ. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದಿದ್ದಾರೆ.
ಪುರುಷರಿಂದ ಎಣ್ಣೆ ಬೇಕು ಹೋರಾಟ, ಮಹಿಳೆಯರಿಂದ ಮದ್ಯ ಬೇಡವೇ ಬೇಡ ಎಂಬ ಪ್ರತಿ ಹೋರಾಟ! - hassan news
ಕೆಲ ದಿನದ ಹಿಂದಷ್ಟೇ ಒಂದಷ್ಟು ಜನ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ನಮ್ಮ ಗ್ರಾಮದ ಸಮೀಪ ಎಣ್ಣೆ ಅಂಗಡಿ ಬೇಡ ಎಂದು ಪ್ರತಿಭಟನೆ ನಡೆಸಿದ್ದರು. ಈಗ ಗ್ರಾಮದ ಪುರುಷರೆಲ್ಲಾ ಬಂದು ಎಣ್ಣೆ ಅಂಗಡಿ ಬೇಕೇ ಬೇಕು ಎಂದು ಹೋರಾಟ ಮಾಡಲು ಮುಂದಾಗಿದ್ದಾರೆ.
ಹೌದು, ಜಿಲ್ಲಾಧಿಕಾರಿ ಕಚೇರಿ ಎದುರು ಬೇಕೆ ಬೇಕು, ಎಣ್ಣೆ ಬೇಕು ಎಂದು ಬ್ಯಾನರ್ ಹಿಡಿದು ಹೋರಾಟಕ್ಕೆ ಇಳಿದಿರೋ ಇವರೆಲ್ಲ ಹಾಸನದ ಗಾಡೇನಹಳ್ಳಿ, ಹಲಸಿನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು. ಎರಡು ದಿನದ ಹಿಂದಷ್ಟೇ ಈ ಭಾಗದ ಒಂದಷ್ಟು ಜನ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ನಮ್ಮ ಗ್ರಾಮದ ಸಮೀಪ ಎಣ್ಣೆ ಅಂಗಡಿ ತೆರೆಯಲು ಸಿದ್ಧತೆ ನಡೆಸಲಾಗ್ತಿದೆ. ಇದ್ರಿಂದ ನಮ್ಮ ಮನೆಗಳಲ್ಲಿ ನೆಮ್ಮದಿ ಇಲ್ಲದಂತಾಗುತ್ತೆ. ರಸ್ತೆಯಲ್ಲಿ ಹೆಣ್ಣುಮಕ್ಕಳು ನೆಮ್ಮದಿಯಾಗಿ ಓಡಾಡಲು ಆಗಲ್ಲ. ಹೀಗಾಗಿ ಎಣ್ಣೆ ಅಂಗಡಿ ಬೇಡವೇ ಬೇಡ ಎಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ ಈ ಬಗ್ಗೆ ಡಿಸಿಗೆ ಮನವಿ ಕೂಡ ಸಲ್ಲಿಸಿದ್ರು.
ಇದರ ಬೆನ್ನಲ್ಲೇ ಈಗ ಎಣ್ಣೆ ಅಂಗಡಿ ಬೇಕು ಅಂತ ಜಿಲ್ಲಾಧಿಕಾರಿಗಳಿಗೆ ಪುರುಷರು ಮನವಿ ಸಲ್ಲಿಸುತ್ತಿದ್ದಾರೆ. ಮಹಿಳೆಯರ ಹೋರಾಟಕ್ಕೆ ಪ್ರತಿಯಾಗಿ ಎಣ್ಣೆಬೇಕು ಅಣ್ಣ ಎಂದು ಹೋರಾಟ ಮಾಡುತ್ತಿರುವ ಗಾಡೇನಹಳ್ಳಿ ಸಮೀಪದ ಗ್ರಾಮದ ಪುರುಷರು ಹೇಳುತ್ತಿರೋದೆ ಬೇರೆ. ನಮಗೆ ಎಣ್ಣೆ ಬೇಕು ಅಂದ್ರೆ 12 ಕಿಲೋಮೀಟರ್ ದೂರವಿರುವ ದುದ್ದ, ಅಥವಾ 7 ಕಿ. ಮೀ. ದೂರವಿರುವ ಶಾಂತಿಗ್ರಾಮಕ್ಕೆ ಹೋಗಬೇಕು. ಎಣ್ಣೆ ಕುಡಿಯಲು ದೂರ ಹೋಗಲು ಹೆಚ್ಚು ಹಣ ಖರ್ಚಾಗುತ್ತೆ. ಅಷ್ಟೇ ಅಲ್ಲದೆ ಹಲವು ದಿನಗಳಿಂದ ಈ ಭಾಗದಲ್ಲಿ ಅಕ್ರಮವಾಗಿ ಹೆಚ್ಚು ಬೆಲೆಗೆ ಮದ್ಯ ಮಾರುತ್ತಿದ್ದಾರೆ. ಇಲ್ಲೊಂದು ಎಣ್ಣೆ ಅಂಗಡಿ ಪ್ರಾರಂಭವಾದ್ರೆ, ದುಬಾರಿ ಹಣಕ್ಕೆ ಕಡಿವಾಣ ಬೀಳುತ್ತೆ ಅಂತೆ.