ಹಾಸನ: ಕೊರೊನಾ ಸೋಂಕು ಹಿನ್ನೆಲೆ ಎಲ್ಲ ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶ ಮಾಡಿದ್ರು ಹಾಸನದಲ್ಲಿ ಶ್ರುಶ್ರೂಷ ಮಹಾವಿದ್ಯಾಲಯ ಮಾತ್ರ ಪಾಠ ಪ್ರವಚನ ಮಾಡೋ ಮೂಲಕ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದೆ.
ನಗರದ ಜಿಲ್ಲಾಧಿಕಾರಿ ನಿವಾಸ ಹಿಂಭಾಗದ ಪಕ್ಕದಲ್ಲಿರುವ ಸರ್ಕಾರಿ ಬಿ.ಎಸ್ಸಿ ನರ್ಸಿಂಗ್ ಕಾಲೇಜು ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದಿದೆ. ಕೋವಿಡ್ ಪ್ರಕರಣದಿಂದ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಬಂದ್ ಮಾಡಬೇಕೆಂದು ಆದೇಶವಿದೆ. ಈ ಕಾಲೇಜನ್ನು ಕೂಡ ಆರಂಭದಲ್ಲಿ ಏ.1 ರಿಂದ ಏ.20ರ ತನಕ ರಜೆ ಘೋಷಣೆ ಮಾಡಿತ್ತು. ಮತ್ತೆ ಏ.21ರಿಂದ ತರಗತಿಯನ್ನ ನಡೆಸುವ ಮೂಲಕ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದೆ.
ಶ್ರುಶ್ರೂಷ ಮಹಾವಿದ್ಯಾಲಯದಲ್ಲಿ ಪಾಠ ಪ್ರವಚನ ಈ ಕಾಲೇಜಿನಲ್ಲಿ ಸದ್ಯ 24ಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದು, ಹಾಸನ ಜಿಲ್ಲೆ ಸೇರಿದಂತೆ ಮಂಗಳೂರು, ಬೆಂಗಳೂರು, ಮೈಸೂರು ಭಾಗಗಳಿಂದ ಈ ಕಾಲೇಜಿಗೆ ವಿದ್ಯಾರ್ಥಿಗಳು ಬಂದಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ಆತಂಕ ಎದುರಾಗಿದೆ.
ಪ್ರಾಂಶುಪಾಲರು ಹೇಳುವ ಪ್ರಕಾರ, ಇವರುಗಳನ್ನು ಕೋವಿಡ್ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಕೆಲಸ ಮುಗಿದ ನಂತರ ಪಾಠ ಮಾಡಲಾಗುತ್ತಿದೆ ಎನ್ನುತ್ತಾರೆ. ಆದ್ರೆ , ರಾಜೀವ್ ಗಾಂಧಿ ಮಹಾವಿದ್ಯಾಲಯ ಮತ್ತು ವಿಜ್ಞಾನ ಸಂಸ್ಥೆ ಈಗಾಗಲೇ ತನ್ನ ಆದೇಶ ಪ್ರತಿಯಲ್ಲಿ ಕಾಲೇಜುಗಳನ್ನ ತೆರೆದು ತರಗತಿಯನ್ನ ನಡೆಸಬಾರದು ಮತ್ತು ಪ್ರತಿ ವಿದ್ಯಾರ್ಥಿಗಳಿಗೂ ಅಂತರ್ಜಾಲದ ಮೂಲಕವೇ ಶಿಕ್ಷಣ ನೀಡಬೇಕೆಂದು ತಿಳಿಸಿದೆ. ಆದೇಶವನ್ನ ಉಲ್ಲಂಘಿಸಬಾರದೆಂದು ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೂ ಈ ಕಾಲೇಜು ಮಾತ್ರ ಇದ್ಯಾವುದನ್ನು ಗಣನೆಗೆ ತೆಗೆದುಕೊಂಡಿಲ್ಲ.