ಕರ್ನಾಟಕ

karnataka

ETV Bharat / state

ತಾರಕಕ್ಕೇರಿದ ದಾಂಪತ್ಯ ಕಲಹ : ಹೆತ್ತ ಮಗುವನ್ನೇ ಕೊಲೆಗೈದ ದಂಪತಿ - ಮಗುವಿನ ಕೊಲೆ

ಸ್ಥಳಕ್ಕೆ ಉಪವಿಭಾಗಾಧಿಕಾರಿಗಳ ಆದೇಶದಂತೆ ಆಲೂರು ತಹಶೀಲ್ದಾರ್ ಶಿರೀನ್ ತಾಜ್ ಮತ್ತು ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸಿದ್ದಾರೆ..

murder
murder

By

Published : Jun 26, 2021, 3:09 PM IST

ಹಾಸನ: ಗಂಡ-ಹೆಂಡತಿಯ ನಡುವಿನ ಗಲಾಟೆಯಲ್ಲಿ ಕೂಸು ಬಡವಾಯಿತು ಅಲ್ಲ ಕೂಸೇ ಪ್ರಾಣಬಿಟ್ಟ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ. ರಫೀಕ್ ಉಲ್ಲ ಇಸ್ಲಾಂ ಮತ್ತು ಸಲ್ಮಾ ಎಂಬ ದಂಪತಿ ಹೆತ್ತ ಮಗನನ್ನೇ ಕೊಲೆ ಮಾಡಿ ಹೂತಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಆಲೂರು ತಾಲೂಕಿನ ಕೆ ಹೊಸಕೋಟೆ ಸಮೀಪದ ಕಾಡ್ಲೂರು ಕೊಪ್ಪಲು ಗ್ರಾಮದಲ್ಲಿಇಂತಹ ಅಮಾನವೀಯ ಘಟನೆ ನಡೆದಿದೆ.

ಲಾಕ್​ಡೌನ್​ ಸಂದರ್ಭದಲ್ಲಿ ಕಾಫಿ ತೋಟದ ಕೂಲಿ ಕೆಲಸಕ್ಕೆಂದು ಬಾಂಗ್ಲಾದೇಶದಿಂದ ಬಂದಿದ್ದ ದಂಪತಿ ನಡುವೆ ಸಾಂಸಾರಿಕ ಕಲಹ ಉಂಟಾಗಿದೆ. ಈ ಜಗಳ ತಾರಕಕ್ಕೇರಿದಾಗ ಆಟವಾಡುತ್ತಿದ್ದ ಮಗು ಮಧ್ಯೆ ಬಂದ ಹಿನ್ನೆಲೆಯಲ್ಲಿ, ಮಗುವಿನ ಮೇಲೆ ಆಕಸ್ಮಿಕವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು, ಮಗು ಸಾವನ್ನಪ್ಪಿದೆ.

ನಂತರ ಮಗುವನ್ನು ಏನು ಮಾಡುವುದು ಎಂದು ತಿಳಿಯದೆ ರಾತ್ರೋರಾತ್ರಿ ಯಾರಿಗೂ ತಿಳಿಯದಂತೆ ಕಾಫಿತೋಟದ ಹಿಂಭಾಗ ಮಗನನ್ನು ಹೂತು ದಂಪತಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ರು. ಆದರೆ ವಾರದಿಂದ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಆದರೂ ಹೆತ್ತವರು ದೂರು ನೀಡದೆ ಸುಮ್ಮನಾಗಿದ್ದರ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಮೂಡಿದೆ. ಈ ಹಿನ್ನೆಲೆ ನೆರೆಹೊರೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಉಪವಿಭಾಗಾಧಿಕಾರಿಗಳ ಆದೇಶದಂತೆ ಆಲೂರು ತಹಶೀಲ್ದಾರ್ ಶಿರೀನ್ ತಾಜ್ ಮತ್ತು ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕೊಲಂಬಿಯಾ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಮೇಲೆ ಗುಂಡಿನ ದಾಳಿ

ABOUT THE AUTHOR

...view details