ಕರ್ನಾಟಕ

karnataka

ETV Bharat / state

ನಿಶ್ಚಿತಾರ್ಥದ ದಿನ ಮದುವೆ ಬೇಡ ಎಂದ ಮಗಳು : ಮನನೊಂದು ದಂಪತಿ ಆತ್ಮಹತ್ಯೆ - ಹಾಸನದಲ್ಲಿ ದಂಪತಿ ಆತ್ಮಹತ್ಯೆ

ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ. ಆಲೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ವೆಂಕಟೇಶ್, ಸಬ್‌ ಇನ್ಸ್‌ಪೆಕ್ಟರ್​ ಮಂಜುನಾಥ್​ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು..

Parents commit suicide for daughter refusing to marry
ಮಗಳು ಮದುವೆ ನಿರಾಕರಿಸಿದ್ದಕ್ಕೆ ಪೋಷಕರು ಆತ್ಮಹತ್ಯೆ

By

Published : Feb 15, 2021, 7:07 PM IST

ಆಲೂರು (ಹಾಸನ) : ನಿಶ್ಚಿತಾರ್ಥದ ದಿನ ಮಗಳು ಮದುವೆ ಬೇಡ ಎಂದಿದ್ದಕ್ಕೆ ಮನನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲೂಕಿನಲ್ಲಿ ನಡೆದಿದೆ.

ಬಲ್ಲೂರು ಪುರ ಗ್ರಾಮದ ಪುಟ್ಟರಾಜು (58) ಮತ್ತು ಅವರ ಪತ್ನಿ ಕಾಂತಮ್ಮ (53) ಆತ್ಮಹತ್ಯೆ ಮಾಡಿಕೊಂಡವರು. ಮೂರು ತಿಂಗಳ ಹಿಂದೆ ತಮ್ಮ ಮಗಳಿಗೆ ಹುಡುಗನನ್ನು ನೋಡಿದ್ದ ಈ ದಂಪತಿ, ಇಂದು ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು.

ಆದರೆ, ಮದುವೆ ದಿನಾಂಕ ಹತ್ತಿರ ಬರುತ್ತಿದೆ ಎನ್ನುವಷ್ಟರಲ್ಲಿ, ಮಗಳು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಪೋಷಕರು, ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಓದಿ : ಪೊಲೀಸ್ ಠಾಣೆಯ ಮುಂಭಾಗವೇ ಶವ ಪತ್ತೆ.. 'ದೃಶ್ಯ' ಸಿನೆಮಾ ನೆನಪಿಸುವಂತಿದೆ ಕೃತ್ಯ!

ಘಟನಾ ಸ್ಥಳಕ್ಕೆ ಹಾಸನ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ. ಆಲೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ವೆಂಕಟೇಶ್, ಸಬ್‌ ಇನ್ಸ್‌ಪೆಕ್ಟರ್​ ಮಂಜುನಾಥ್​ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details