ಕರ್ನಾಟಕ

karnataka

ETV Bharat / state

ಸರಳವಾಗಿ ನಡೆದ ಆರ್‌ಎಸ್‌ಎಸ್‌ ಪಾಂಚಜನ್ಯ ಗಣೇಶ ನಿಮಜ್ಜನ ಕಾರ್ಯಕ್ರಮ - ಸರಳವಾಗಿ ನಡೆದ ಆರ್‌ಎಸ್‌ಎಸ್‌ ಪಾಂತಜನ್ಯ ಗಣೇಶ ನಿಮಜ್ಜನ ಕಾರ್ಯಕ್ರಮ

ಕಳೆದ ಹಲವಾರು ವರ್ಷಗಳಿಂದ ಪಾಂಚಜನ್ಯ ಗಣೇಶ ಮೂರ್ತಿಯನ್ನು ಹಲವಾರು ದಿನಗಳ ಕಾಲ ಇಟ್ಟು, ಪ್ರತಿ ದಿನ ವಿಭಿನ್ನವಾದ ದೇಶ ಪ್ರೇಮ ಮೂಡಿಸುವ, ಭಕ್ತಿ ಪ್ರಧಾನದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಆದೇಶದಂತೆ ಸರಳ ಆಚರಣೆ ನಡೆಯಿತು.

hassan
ಸರಳವಾಗಿ ನಡೆದ ಆರ್‌ಎಸ್‌ಎಸ್‌ ಪಾಂತಜನ್ಯ ಗಣೇಶ ನಿಮಜ್ಜನ ಕಾರ್ಯಕ್ರಮ

By

Published : Aug 24, 2020, 11:57 PM IST

ಹಾಸನ:ಆರ್‌ಎಸ್‌ಎಸ್‌ನ ಪಾಂಚಜನ್ಯ ಗಣೇಶ ಮಹೋತ್ಸವದಲ್ಲಿ ಸಾರ್ವಜನಿಕರು ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಸರಳವಾಗಿ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ತಂದು ನಿಮಜ್ಜನ ಮಾಡಿದರು.

ಸರಳವಾಗಿ ನಡೆದ ಆರ್‌ಎಸ್‌ಎಸ್‌ ಪಾಂಚಜನ್ಯ ಗಣೇಶ ನಿಮಜ್ಜನ ಕಾರ್ಯಕ್ರಮ

ಕಳೆದ ಹಲವಾರು ವರ್ಷಗಳಿಂದ ಪಾಂಚಜನ್ಯ ಗಣೇಶ ಮೂರ್ತಿಯನ್ನು ಹಲವಾರು ದಿನಗಳ ಕಾಲ ಇಟ್ಟು, ಪ್ರತಿ ದಿನ ವಿಭಿನ್ನವಾದ ದೇಶ ಪ್ರೇಮ ಮೂಡಿಸುವ, ಭಕ್ತಿ ಪ್ರಧಾನದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಕೊರೊನಾದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಆದೇಶದಂತೆ ಗಣಪತಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಹಿಂದೆಲ್ಲಾ ಮೆರವಣಿಗೆಯ ಜೊತೆಯಲ್ಲಿ ಶೋಭಾಯಾತ್ರೆ ಜೊತೆಗೆ ಆಕರ್ಷಕ ಸ್ತಬ್ಧಚಿತ್ರಗಳು ಹಾಗೂ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಆದರೆ ಈ ಬಾರಿ ಕೆಲವೇ ಜನರು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇಂದು ಸಂಜೆ ಹೊರಟ ಮೆರವಣಿಗೆಯು ಕೆಲ ಮುಖ್ಯ ರಸ್ತೆಗಳಲ್ಲಿ ಹೋಗಲು ಸಿದ್ಧವಾಗಿದ್ದವು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆಗಮಿಸಿ ಸರ್ಕಾರದ ಆದೇಶದಂತೆ ಗಣೇಶ ಉತ್ಸವ ನಡೆಸಬೇಕು, ಮೆರವಣಿಗೆಯನ್ನು ಹೆಚ್ಚು ಹೊತ್ತು ನಡೆಸದಂತೆ ಹಾಗೂ ಜನರು ಕೂಡ ಹೆಚ್ಚು ಸೇರದಂತೆ ಸರಳವಾಗಿ ನಡೆಸಲು ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು.

ABOUT THE AUTHOR

...view details