ಹಾಸನ: ಆರನೇ ವೇತನ ಆಯೋಗ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದಿನಿಂದ ಸಾರಿಗೆ ಮುಷ್ಕರ ನಡೆಯುತ್ತಿದ್ದು, ಹಾಸನದಲ್ಲಿ ಸಾರಿಗೆ ನೌಕರನೊಬ್ಬ ವಿಭಿನ್ನ ಮುಷ್ಕರ ಆರಂಭಿಸಿದ್ದಾರೆ.
ಸಿಎಂಗೆ ಮನವಿ ಸಲ್ಲಿಸಲು ಪಾದಯಾತ್ರೆ ಹೊರಟ ಸಾರಿಗೆ ನೌಕರ - transportation staffs strike
ಚಾಲಕ ಕಂ ನಿರ್ವಾಹಕ ಪ್ರದೀಪ್ ಎಂಬವರು ಸಿಎಂ ಯಡಿಯೂರಪ್ಪಗೆ 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಮನವಿ ಮಾಡಲು ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದಾರೆ.
ಪಾದಯಾತ್ರೆ
ಜಿಲ್ಲೆಯ ಚನ್ನರಾಯಪಟ್ಟಣ ಡಿಪೋದಿಂದ ಏಕಾಂಗಿಯಾಗಿ ಬೆಂಗಳೂರಿನ ಸಿಎಂ ನಿವಾಸಕ್ಕೆ ನೌಕರ ಪ್ರದೀಪ್ ಪಾದಯಾತ್ರೆ ಹೊರಟಿದ್ದಾರೆ. ಅರಕಲಗೂಡು ಡಿಪೋದ ಚಾಲಕ ಕಂ ನಿರ್ವಾಹಕನಾಗಿರುವ ಇವರು ತಮ್ಮ ಸ್ವಗ್ರಾಮ ಚನ್ನರಾಯಪಟ್ಟದಿಂದ ಬೆಳಗ್ಗೆ ಪಾದಯಾತ್ರೆ ಶುರು ಮಾಡಿದ್ದಾರೆ.
ಪಾದಯಾತ್ರೆ ಆರಂಭಿಸುತ್ತಲೇ ವಿಡಿಯೋ ಮಾಡಿರುವ ಪ್ರದೀಪ್, ಇದು ಏಕಾಂಗಿ ಪಾದಯಾತ್ರೆ ಎಂದುಕೊಳ್ಳಬೇಡಿ, ಎಲ್ಲ ನೌಕರರ ಪ್ರತೀಕದ ಪಾದಯಾತ್ರೆ. ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಿ, ಸಮಸ್ಯೆ ಬಗೆಹರಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.