ಹಾಸನ/ಹೊಳೆನರಸೀಪುರ:ಪ್ರಬುದ್ಧ ಮತದಾರರು ಎಂದಿಗೂ ಪಕ್ಷವನ್ನು ಕೈಬಿಡುವುದಿಲ್ಲ. ಈ ಬಾರಿ ಸಾವಿರ ಮತಗಳಿಗಿಂತ ಅಧಿಕ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹಾಸನದ ಶಾಸಕ ಪ್ರೀತಮ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಗಂಧದ ಕೋಟೆಯ ಬಳಿ ಇರುವ ಸರ್ಕಾರಿ ಕಾಲೇಜಿನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಕೇವಲ 150 ಮತಗಳ ಅಂತರಗಳಿಂದ ಪರಾಭವಗೊಂಡಿದ್ದರು. ಆಗ ಮೈಸೂರು ಭಾಗದಲ್ಲಿ ನಮ್ಮ ಪ್ರಾಬಲ್ಯ ಇಲ್ಲದಿದ್ದರಿಂದ ಚುನಾವಣೆಯಲ್ಲಿ ಸೋಲನುಭವಿಸಿದ್ದರು ಎಂದರು.