ಕರ್ನಾಟಕ

karnataka

ETV Bharat / state

ಸಕಲೇಶಪುರ: ಕಾಡಾನೆಗೆ ರೇಡಿಯೋ ಕಾಲರ್​ ಅಳವಡಿಕೆ

ಶಾರ್ಪ್ ಶೂಟರ್ ವೆಂಕಟೇಶ್ ಸಾಕಾನೆಗಳ ಸಹಕಾರದಿಂದ ರೈಫಲ್ ಮೂಲಕ ಹೆಣ್ಣಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ರೇಡಿಯೋ ಕಾಲರ್ ಅಳವಡಿಸಿ ಪುನಃ ಕಾಡಿಗೆ ಆನೆಯನ್ನು ಬಿಡಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೊಡ್ಡ ಬೆಟ್ಟದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.

Hassan
ಸಕಲೇಶಪುರ: ಕಾಡಾನೆಗೆ ರೇಡಿಯೋ ಕಾಲರ್ ಯಶಸ್ವಿ

By

Published : Jan 23, 2021, 3:53 PM IST

ಸಕಲೇಶಪುರ/ಹಾಸನ: ಮೂರು ದಿನಗಳ ಬಳಿಕ ಹೆಣ್ಣಾನೆಯೊಂದಕ್ಕೆ ರೇಡಿಯೋ ಕಾಲರ್ ಹಾಕುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸಕಲೇಶಪುರ: ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ

ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ನಿರಂತರವಾಗಿ ಪ್ರಾಣಿ ಮತ್ತು ಮಾನವನ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿತ್ತು. ಅಲ್ಲದೇ ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ಸಾಲು ಸಾಲು ಪ್ರತಿಭಟನೆಗಳು ನಡೆದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತು ಈಗ ಒಂದು ಗಂಡು ಕಾಡಾನೆ ಮತ್ತು ಮತ್ತು ಮೂರು ಹೆಣ್ಣು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಕ್ಕೆ ಅನುಮತಿ ನೀಡಿದೆ. ಮೂರು ದಿನಗಳ ಬಳಿಕ ಒಂದು ಹೆಣ್ಣಾನೆಗೆ ರೇಡಿಯೋ ಕಾಲರ್ ಹಾಕುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಶಾರ್ಪ್ ಶೂಟರ್ ವೆಂಕಟೇಶ್ ಸಾಕಾನೆಗಳ ಸಹಕಾರದಿಂದ ರೈಫಲ್ ಮೂಲಕ ಹೆಣ್ಣಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ರೇಡಿಯೋ ಕಲರ್ ಅಳವಡಿಸಿ ಪುನಃ ಕಾಡಿಗೆ ಆನೆಯನ್ನು ಬಿಡಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೊಡ್ಡ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಘಾಸಿಗೊಂಡಿರುವ ಕಾಡಾನೆಯನ್ನು ನೋಡಿ ಉಳಿದ ಆನೆಗಳು ದೊಡ್ಡಬೆಟ್ಟದ ಕಡೆಯಿಂದ ಬೋಸ್ಮಾನಹಳ್ಳಿ ಕಡೆಗೆ ವಲಸೆ ಹೊರಟಿವೆ.

ಓದಿ:ಆನೆಗಳ ಸಂಚಾರ ತಿಳಿಯಲು ರೇಡಿಯೋ ಕಾಲರ್​​ ಹಾಕಲು ಮುಂದಾದ ಅರಣ್ಯ ಇಲಾಖೆ

ಇನ್ನುಳಿದ ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಮತ್ತು ಒಂದು ಗಂಡಾನೆಯನ್ನು ಹಿಡಿದು ಸ್ಥಳಾಂತರ ಮಾಡುವ ಕಾರ್ಯ ಬಾಕಿ ಉಳಿದಿದ್ದು, ಮೂರ್ನಾಲ್ಕು ದಿನಗಳಲ್ಲಿ ಯಶಸ್ವಿಯಾಗಿ ಮಾಡಲಾಗುವುದು ಎಂದು ಡಿಎಫ್ಒ ಬಸವರಾಜ್ ತಿಳಿಸಿದ್ದಾರೆ.

ABOUT THE AUTHOR

...view details