ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಕೊರೊನಾ ವೈರಸ್​ಗೆ ಮತ್ತೊಂದು ಬಲಿ - one more coronavirus patient dead in hassan

ಕೋವಿಡ್​-19ಗೆ ಹಾಸನದಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 6ಕ್ಕೇರಿದೆ. ಒಟ್ಟಾರೆ 432 ಮಂದಿಗೆ ಸೋಂಕು ತಗುಲಿದೆ.

one-more-coronavirus-patient-dead-in-hassan
ಹಾಸನದಲ್ಲಿ ಕೊರೊನಾ ವೈರಸ್​ಗೆ ಮತ್ತೊಂದು ಬಲಿ

By

Published : Jul 3, 2020, 9:39 AM IST

ಹಾಸನ:ಜಿಲ್ಲೆಯಲ್ಲಿ ಕಿಲ್ಲರ್‌ ಕೊರೊನಾದಿಂದ ಮತ್ತೊಂದು ಸಾವು ಸಂಭವಿಸಿದ್ದು, ಸಾವಿನ‌ ಸಂಖ್ಯೆ 6ಕ್ಕೆ‌ ಏರಿಕೆಯಾಗಿದೆ.

ಸಕಲೇಶಪುರ ತಾಲೂಕಿನ 75 ವರ್ಷದ ವೃದ್ಧೆ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ನ್ಯುಮೋನಿಯಾ, ತೀವ್ರ ಉಸಿರಾಟದ ತೊಂದರೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ವೃದ್ಧೆಗೆ ಹಾಸನದ ಕೋವಿಡ್ ಆಸ್ಪತ್ರೆ ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ‌ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಿನ್ನೆ ಕೂಡ 6 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 432ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details