ಕರ್ನಾಟಕ

karnataka

ETV Bharat / state

ಹಾಸನ: ಪೊಲೀಸ್​ ಕಾನ್ಸ್​ಟೆಬಲ್​ಗೆ ಕೊರೊನಾ ಸೋಂಕು: ದಾಸನಹಳ್ಳಿ ರಸ್ತೆ ಸೀಲ್ ಡೌನ್ - ಹಾಸನ ಸುದ್ದಿ

ದಾಸನಹಳ್ಳಿ ಗ್ರಾಮದ ಪೊಲೀಸ್ ಕಾನ್ಸ್​ಟೆಬಲ್​ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ದಾಸನಹಳ್ಳಿ ರಸ್ತೆಯನ್ನು ಸೀಲ್​ ಡೌನ್​ ಮಾಡಲಾಗಿದೆ.

Seal down
Seal down

By

Published : Jun 4, 2020, 7:03 PM IST

ಹಾಸನ:ಮುಂಬೈನಿಂದ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೂಡಾ ಏರಿಕೆಯಾಗ್ತಿದೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ದಾಸನಹಳ್ಳಿ ಗ್ರಾಮದ ಪೊಲೀಸ್ ಕಾನ್ಸ್​ಟೆಬಲ್​ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್​ ಸಂತೋಷ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸೀಲ್ ಡೌನ್ ಮಾಡಿದ್ದಾರೆ.

ಬೆಳಗಾವಿ ಗಡಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕರ್ತವ್ಯಕ್ಕೆ ತೆರಳಿದ್ದ ಅರಸೀಕೆರೆ ಮೂಲದ ಪೊಲೀಸ್ ಒಬ್ಬರಿಗೆ ಪಾಸಿಟಿವ್​ ಬಂದಿತ್ತು. ಈ ಹಿನ್ನಲೆಯಲ್ಲಿ ಆತ ಓಡಾಡಿರೋ ದಾಸನಹಳ್ಳಿಯ ರಸ್ತೆಯನ್ನ ಸದ್ಯ ತಾಲೂಕು ಆಡಳಿತ ಸೀಲ್ ಡೌನ್ ಮಾಡಿದೆ.

ಸೀಲ್ ಡೌನ್ ಆದ ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಪಟೇಲ್ ಶಿವಪ್ಪ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರಿಗೆ ಎಲ್ಲೂ ಹೊರಗಡೆ ಓಡಾಡದಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಇಒ ನಟರಾಜ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುಚ್ಚೇಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಮಹಾಲಿಂಗಪ್ಪ, ಬಸವರಾಜು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ABOUT THE AUTHOR

...view details