ಕರ್ನಾಟಕ

karnataka

ETV Bharat / state

ಮತದಾನದ ಬಳಿಕ ಹೃದಯಾಘಾತ; ವೃದ್ಧೆ ಸಾವು - Old woman death after voting in Hassan

ವೃದ್ಧೆಯೊಬ್ಬಳಿಗೆ ತನ್ನ ಮತದಾನದ ಹಕ್ಕು ಚಲಾವಣೆ ಮಾಡಿದ ಬಳಿಕ ಹೃದಯಾಘಾತ ಸಂಭವಿಸಿದೆ. ಮತದಾನ ಮಾಡಿದ ಬಳಿಕ ಮನೆಗೆ ತೆರಳಿ ವಿಶ್ರಮಿಸಿಕೊಳ್ಳಲು ಸ್ವಲ್ಪ ಹೊತ್ತು ಮಲಗಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದೆ.

Old woman death after voting in Hassan
ಸಂಗ್ರಹ ಚಿತ್ರ

By

Published : Dec 23, 2020, 3:01 AM IST

ಹಾಸನ: ಮತ ಚಲಾವಣೆ ಮಾಡಿದ ಬಳಿಕ ವೃದ್ಧೆಯೊಬ್ಬಳು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಇದನ್ನೂ ಓದು : ಕಾರವಾರ, ಭಟ್ಕಳದಲ್ಲಿ 100ರ ಗಡಿ ದಾಟಿದ ಶತಾಯುಷಿಗಳಿಂದ ಮತ ಚಲಾವಣೆ

ತಾಲೂಕಿನ ಮತ್ತೂರಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು 81 ವರ್ಷದ ರತ್ನಮ್ಮ ಮೃತಪಟ್ಟ ವೃದ್ಧೆ ಎಂದು ತಿಳಿದು ಬಂದಿದೆ. ಯಸಳೂರು ಹೋಬಳಿಯ ಚಂಗಡಿಹಳ್ಳಿ ಮತಗಟ್ಟೆಯಲ್ಲಿ ಮಂಗಳವಾರ ಮಧ್ಯಾಹ್ನ ಆಗಮಿಸಿ ಮತದಾನ ಮಾಡಿದ ರತ್ನಮ್ಮ, ವಾಪಸ್ ಮನೆಗೆ ಹಿಂತಿರಿಗಿದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ವೃದ್ಧ ಮಹಿಳೆ

81ರ ವಯೋವೃದ್ಧರಾಗಿರುವ ರತ್ನಮ್ಮ, ತನ್ನ ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದರು. ಮತದಾನ ಮಾಡಿದ ಬಳಿಕ ಮನೆಗೆ ತೆರಳಿ ವಿಶ್ರಮಿಸಿಕೊಳ್ಳಲು ಸ್ವಲ್ಪ ಹೊತ್ತು ಮಲಗಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ABOUT THE AUTHOR

...view details