ಕರ್ನಾಟಕ

karnataka

ETV Bharat / state

ತಲೆಗೆ ಗುಂಡು ಹಾರಿಸಿಕೊಂಡು ವೃದ್ಧ ಸಾವು..! - ಸಕಲೇಶಪುರ ತಲೆಗೆ ಗುಂಡು ಹಾರಿಸಿಕೊಂಡು ವೃದ್ಧ ಸಾವು

ಬಂದೂಕಿನಿಂದ ಹಣೆಗೆ ಗುಂಡು ಹಾರಿಸಿಕೊಂಡು ವೃದ್ಧರೊಬ್ಬರು ಮೃತ ಪಟ್ಟಿರುವ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಮೃತ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

old-man-dies-by-shooting-himself-in-the-head
ವೃದ್ಧ ಸಾವು

By

Published : Oct 8, 2021, 5:56 PM IST

ಸಕಲೇಶಪುರ: ಹಣೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪದ ಬನವಾಸೆ ಗ್ರಾಮದಲ್ಲಿ ನಡೆದಿದೆ.

ಬಸವಲಿಂಗಪ್ಪ (71) ಮೃತಪಟ್ಟ ದುರ್ದೈವಿ. ಗುರುವಾರ ಸಂಜೆ ತಮ್ಮ ಮನೆಯಲ್ಲಿ ಬಂದೂಕಿನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೃತರ ಪತ್ನಿ ಮನೆಯ ಹೊರಗಡೆ ಇದ್ದರು ಎಂದು ತಿಳಿದು ಬಂದಿದೆ. ಗುಂಡು ಹಾರಿದ ರಭಸಕ್ಕೆ ತಲೆ ಚಿಂದಿ ಚಿಂದಿಯಾಗಿದ್ದು, ಗುಂಡಿನ ಶಬ್ದಕ್ಕೆ ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮೃತರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಚೈತನ್ಯ ಕುಮಾರ್ ಬಂದು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details