ಹಾಸನ :ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಾಂಧಿ ಸರ್ಕಲ್ ಬಳಿಯಿರುವ ದಿವಂಗತ ಮಾಜಿ ಸಚಿವ ಎಚ್ ಸಿ ಶ್ರೀಕಂಠಯ್ಯ ಅವರ ಮನೆಯ ಪಕ್ಕದಲ್ಲಿ ಘಟನೆ ನಡೆದಿದೆ.
ಮನೆ ಕಟ್ಟುವ ವಿಚಾರದಲ್ಲಿ 6 ವರ್ಷಗಳ ಹಿಂದೆ ದೇವರಾಜು ಮತ್ತು ಶಿವರಾಮ್ ಎಂಬ ಅಕ್ಕಪಕ್ಕದ ಮನೆಯವರಿಗೆ ಸಣ್ಣಪುಟ್ಟ ಗಲಾಟೆ ನಡೆದಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಲೇರಿತ್ತು.
ಈ ಬಗ್ಗೆ ಶಿವರಾಮ್ ಕುಟುಂಬಕ್ಕೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದರು. ಆ ಬಳಿಕ ನಿನ್ನೆ ರಾತ್ರಿ ಅಶ್ಲೀಲ ಪದಗಳನ್ನು ಬಳಸಿ ಶಿವರಾಮ್ ಕುಟುಂಬ, ಮಂಜುಳಾ ಮೇಲೆ ಆರೋಪ ಮಾಡಿ ಕ್ಯಾತೆ ತೆಗೆದಿದ್ದಾರಂತೆ. ಮಂಜುಳಾ ತಕ್ಷಣ ಈ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ತಮ್ಮ ಪತಿಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದಾರೆ.
ಹಳೆ ದ್ವೇಷ ಪಕ್ಕದ ಮನೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ತಕ್ಷಣ ಮನೆಯ ಬಳಿ ಬಂದ ಮಂಜುಳಾ ಅವರ ಪತಿ ದೇವರಾಜು ಮೇಲೆ ಮಾರಕಾಸ್ತ್ರಗಳಿಂದ ಶಿವರಾಮ್ ಪುತ್ರ ಶಿವರಾಜ್ ಏಕಾಏಕಿ ಹಲ್ಲೆ ಮಾಡಿದ್ದಾನೆ. ಕಬ್ಬಿನಿಂದ ರಾಡಿನಿಂದ ದೇವರಾಜ್ ಅವರ ತಲೆಗೆ ಬಲವಾಗಿ ಹೊಡೆದಿದ್ದರಿಂದ ದೇವರಾಜ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ದೇವರಾಜು ಅವರ ಮಕ್ಕಳು ತಂದೆಯನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಲ್ಲೆ ನಡೆಸಿದ ಶಿವರಾಜ್ ಮೇಲೆ ಮನೆ ಕಳ್ಳತನ, ಹಲ್ಲೆ ಪ್ರಕರಣಗಳಿವೆ.