ಕರ್ನಾಟಕ

karnataka

ETV Bharat / state

ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾತ್ರೆ ವಶಪಡಿಸಿಕೊಂಡ ಅಧಿಕಾರಿಗಳು - ಮಾತ್ರೆ

ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮಾತ್ರೆಗಳನ್ನ ಆ್ಯಂಟಿ ಡ್ರಗ್ಸ್ ಸ್ಕ್ವಾಡ್ ಮತ್ತು ತಾಲೂಕು ಆಡಳಿತ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

dsd
ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾತ್ರೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

By

Published : Aug 7, 2020, 8:55 AM IST

ಅರಸೀಕೆರೆ(ಹಾಸನ): ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮಾತ್ರೆಗಳನ್ನ ಆ್ಯಂಟಿ ಡ್ರಗ್ಸ್ ಸ್ಕ್ವಾಡ್ ಮತ್ತು ತಾಲೂಕು ಆಡಳಿತ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.

ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಾತ್ರೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

ಬಾಣಾವಾರ ಸಮೀಪದ ಕುರುವಂಕ ಗ್ರಾಮದಲ್ಲಿ ಸುಬ್ರಹ್ಮಣ್ಯ ಎಂಬಾತ ಮಳಿಗೆಯಲ್ಲಿ ಅಕ್ರಮ ದಾಸ್ತಾನು ಮಾಡಿದ್ದ. ಎರಡು ವರ್ಷಗಳ ಹಿಂದೆ ಸಿದ್ದೇಶ್ ಎಂಬುವವರು ಮಳಿಗೆಯನ್ನ ಹಾರನಹಳ್ಳಿ ಗ್ರಾಮದ ಸುಬ್ರಹ್ಮಣ್ಯಗೆೆ ಬಾಡಿಗೆ ನೀಡಿದ್ರು.

ಆದ್ರೆ ಸುಬ್ರಹ್ಮಣ್ಯ ಕೆಲಸಗಾರರನ್ನ ನೇಮಕ ಮಾಡಿಕೊಂಡು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ದಾಸ್ತಾನು ವಶಪಡಿಸಿಕೊಂಡು ಅಂಗಡಿ ಸೀಲ್​ ಮಾಡಿದ್ದಾರೆ.

ABOUT THE AUTHOR

...view details