ಹಾಸನ:ಸರ್ಕಾರ ಪಡಿತರ ಚೀಟಿ ಮೂಲಕ ಬಡವರಿಗೆ ನೀಡುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಲು ದಾಸ್ತಾನು ಮಾಡಿಟ್ಟಿದ್ದ ಕೇಂದ್ರದ ಮೇಲೆ ತಡರಾತ್ರಿ ಆಹಾರ ಮತ್ತು ಸರಬರಾಜು ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಾಸನದ ಬನಶಂಕರಿ ಕಲ್ಯಾಣ ಮಂಟಪ ಬಳಿಯ ಮಸೀದಿ ಗೋದಾಮಿನಲ್ಲಿದ್ದ 100 ಕ್ವಿಂಟಲ್ ಅಕ್ಕಿ ಹಾಗೂ ಇತರೆ ಸಾಮಾನುಗಳನ್ನು ಕೂಡಿಡಲಾಗಿತ್ತು.ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ರಾತ್ರಿ ಸುಮಾರು 12 ಗಂಟೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.