ಹಾಸನ:ರಾಜ್ಯದ 60 ಸಾವಿರಕ್ಕಿಂತ ಹೆಚ್ಚಿನ ಮನೆಗಳಿಗೆ 5 ಲಕ್ಷ, ಮನೆಗಳ ದುರಸ್ತಿಗೆ 1 ಲಕ್ಷ, ನಿರಾಶ್ರಿತರಿಗೆ ತುರ್ತು ವಸತಿಗಾಗಿ 50 ಸಾವಿರ ಪರಿಹಾರ ಘೋಷಣೆ ಮಾಡಿದ್ದೇವೆ. ಇಂತಹ ಪರಿಹಾರವನ್ನ ಯಾವುದೇ ಸರ್ಕಾರ ನೀಡಿಲ್ಲ ಅಂತ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ರು.
ನಮ್ಮಷ್ಟು ಪರಿಹಾರ ಯಾವ ಸರ್ಕಾರವೂ ಕೊಟ್ಟಿಲ್ಲ:ಡಿಸಿಎಂ ಡಾ.ಅಶ್ವತ್ಥ್ ನಾರಾಯಣ
ನಮ್ಮ ಸರ್ಕಾರ ನಿರಾಶ್ರಿತರಿಗೆ ಹಾಗೂ ಸಂತ್ರಸ್ತರಿಗೆ ನೀಡಿರುವಷ್ಟು ಪರಿಹಾರವನ್ನು ಯಾವುದೇ ಸರ್ಕಾರ ನೀಡಿಲ್ಲ ಅಂತ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಹಾಸನದಲ್ಲಿ ಹೇಳಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು ರಾಜ್ಯದ ಬರ ಪರಿಹಾರ ನಿರ್ವಹಣೆಯಲ್ಲಿ ಯಾವುದೇ ತಾರತಮ್ಯ ಇಲ್ಲ, ಎಲ್ಲ ಭಾಗದ ಎಲ್ಲಾ ಜಾಗವು ಕರ್ನಾಟಕ ರಾಜ್ಯವೇ. ಹಾಗಾಗಿ ತಾರತಮ್ಯ ಮಾಡುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ರು.
ಕೇಂದ್ರದ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ನೆರೆ ಪೀಡಿತ ಸ್ಥಳಗಳ ವೀಕ್ಷಣೆ ಮಾಡಿದ್ದಾರೆ. ಕಳೆದ 30 ವರ್ಷಗಳಲ್ಲಿ ನೀಡದಿರುವ ಬರ ಪರಿಹಾರವನ್ನು ಕೇಂದ್ರವೇ ರಾಜ್ಯಕ್ಕೆ ನೀಡಿದೆ. ರಾಜ್ಯದ ಅತಿವೃಷ್ಟಿ ವಿಚಾರದಲ್ಲಿ ಹಿಂದೆ ಎಂದು ನೀಡದ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ ಎಂದ್ರು.ಸರ್ಕಾರ ಅಸ್ಥಿರಗೊಳ್ಳುತ್ತದೆ ಎಂಬ ಪ್ರಶ್ನೆ ಈಗ ಮುಗಿದು ಹೋದ ಅಧ್ಯಾಯ. ನಮ್ಮ ಸರ್ಕಾರ ಐದು ವರ್ಷಗಳನ್ನು ಪೂರೈಸಲಿದೆ. ಹಾಗಾಗಿ ಇನ್ನು ಮುಂದೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ. ಎಂದು ಸ್ಪಷ್ಟಪಡಿಸಿದ್ರು.