ಹಾಸನ: ಈಗಿರುವ ಕೊರೊನಾ ಕರ್ಫ್ಯೂವನ್ನೇ ಸರ್ಕಾರ ಲಾಕ್‍ಡೌನ್ ಎಂದು ಹೆಸರು ಬದಲಿಸಿದೆ. ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನತಾ ಕರ್ಫ್ಯೂವಿನಿಂದ ಪ್ರಯೋಜನ ಇಲ್ಲ, ಸಂಪೂರ್ಣ ಲಾಕ್‍ಡೌನ್ ಮಾಡಬೇಕು: ಪ್ರಜ್ವಲ್ ರೇವಣ್ಣ - No benefit from Janata curfew said Prajwal Revanna
ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
![ಜನತಾ ಕರ್ಫ್ಯೂವಿನಿಂದ ಪ್ರಯೋಜನ ಇಲ್ಲ, ಸಂಪೂರ್ಣ ಲಾಕ್‍ಡೌನ್ ಮಾಡಬೇಕು: ಪ್ರಜ್ವಲ್ ರೇವಣ್ಣ Prajwal Revanna](https://etvbharatimages.akamaized.net/etvbharat/prod-images/768-512-11689592-thumbnail-3x2-vis.jpg)
ನಗರದಲ್ಲಿ ಮಾತನಾಡಿದ ಪ್ರಜ್ವಲ್, ನಿತ್ಯ 50 ರಿಂದ 55 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಅದಕ್ಕಿಂತ ಕೆಟ್ಟ ಸುದ್ದಿ ಎಂದರೆ ಪ್ರತಿ ದಿನ 250 ರಿಂದ 300 ಜನ ಮೃತಪಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಲಾಕ್‍ಡೌನ್ ಮಾಡಿದ್ದರಿಂದ ಈಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ನಿತ್ಯ 6 ರಿಂದ 12 ಗಂಟೆ ಓಡಾಡಲು ಬಿಟ್ಟು ಸಂಜೆಯಿಂದ ಲಾಕ್‍ಡೌನ್ ಮಾಡ್ತೀವಿ ಅಂತಿದ್ದಾರೆ.
ಈ ಲಾಕ್‍ಡೌನ್ ಫಲ ತರುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ತೊಂದರೆ ಇದೆ, ಇದಕ್ಕೆ ಸರ್ಕಾರವೇ ಹೊಣೆ. ಲಾಕ್‍ಡೌನ್ ನಿಯಮಗಳನ್ನು ಬದಲಿಸಿ ಅಥವಾ ಎರಡು ದಿನ ಅಗತ್ಯವಸ್ತು ಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಂಪೂರ್ಣ ಲಾಕ್‍ಡೌನ್ ಮಾಡದಿದ್ದರೆ ಸೋಂಕಿತರ ಸಂಖ್ಯೆ ಕಡಿಮೆ ಆಗಲು ಸಾಧ್ಯವಿಲ್ಲ. ದಯವಿಟ್ಟು ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಒತ್ತಾಯಿಸಿದ್ದಾರೆ.