ಹಾಸನ:ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ, ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳವರೆಗೆ ಭಾರೀ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಅಗತ್ಯ ಎಚ್ಚರಿಕೆವಹಿಸಿ ಕೆರೆ-ಕಟ್ಟೆ ಹಾಗೂ ನದಿಪಾತ್ರಗಳ ಹತ್ತಿರ ಹೋಗಬಾರದು. ತಗ್ಗು ಪ್ರದೇಶಗಳಲ್ಲಿ ಇರುವವರು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು. ಜಾನುವಾರುಗಳನ್ನು ಬಿಡದಿರುವಂತೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಗುಡ್ಡ ಕುಸಿತವಾಗುವ ಸಾಧ್ಯತೆ ಹಾಗೂ ನದಿಗಳಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗುವುದರಿಂದ ನದಿಪಾತ್ರಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲು ಸಹಕರಿಸುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ.
ಹಾಸನದಲ್ಲಿ ಸುರಿಯುತ್ತಿರುವ ಮಳೆ ತುರ್ತು ಸಂದರ್ಭಗಳಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೊಠಡಿ ದೂರವಾಣಿ ಸಂಖ್ಯೆ: 08172-261111 ಹಾಗೂ 1077ಗೆ ಕರೆ ಮಾಡುವಂತೆ ಕೋರಿದೆ.
ಜಿಲ್ಲೆಯ ನಾನಾ ಭಾಗದ ಮಳೆ:
ಹಾಸನ ತಾಲ್ಲೂಕಿನ ಸಾಲಗಾಮೆ 15 ಮಿ.ಮೀ., ಹಾಸನ 20.4 ಮಿ.ಮೀ., ದುದ್ದ 8.6 ಮಿ.ಮೀ., ಶಾಂತಿಗ್ರಾಮ 26.8 ಮಿ.ಮೀ., ಕಟ್ಟಾಯ 18.3 ಮಿ.ಮೀ., ಗೊರೂರು 27.3 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಹೊಸೂರು 113 ಮಿ.ಮೀ., ಶುಕ್ರವಾರ ಸಂತೆ 193 ಮಿ.ಮೀ., ಹೆತ್ತೂರು 212.6 ಮಿ.ಮೀ., ಯಸಳೂರು 152 ಮಿ.ಮೀ., ಸಕಲೇಶಪುರ 133.8 ಮಿ.ಮೀ., ಬಾಳ್ಳುಪೇಟೆ 78.2 ಮಿ.ಮೀ., ಬೆಳಗೋಡು 80.1 ಮಿ.ಮೀ., ಮಾರನಹಳ್ಳಿ 296.1 ಮಿ.ಮೀ., ಹಾನುಬಾಳು 160.6 ಮಿ.ಮೀ., ಮಳೆ ಸುರಿದಿದೆ.
ಅರಸೀಕೆರೆ ತಾಲ್ಲೂಕಿನ ಜಾವಗಲ್ 5 ಮಿ.ಮೀ., ಗಂಡಸಿ 8.6 ಮಿ.ಮೀ., ಕಸಬಾ 7 ಮಿ.ಮೀ., ಕಣಕಟ್ಟೆ 4.6 ಮಿ.ಮೀ., ಯಳವಾರೆ 15.2 ಮಿ.ಮೀ. ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು 5.4 ಮಿ.ಮೀ., ಹೊಳೆನರಸೀಪುರ 6.6 ಮಿ.ಮೀ., ಹಳೆಕೋಟೆ 10.4 ಮಿ.ಮೀ. ಸುರಿದಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 56 ಮಿ.ಮೀ., ಕಸಬಾ 30.2 ಮಿ.ಮೀ., ದೊಡ್ಡಮಗ್ಗೆ 12.2 ಮಿಮೀ., ರಾಮನಾಥಪುರ 31.2 ಮಿ.ಮೀ., ಬಸವಪಟ್ಟಣ 4.2 ಮಿ.ಮೀ., ಕೊಣನೂರು 9.2 ಮಿ.ಮೀ., ದೊಡ್ಡಬೆಮ್ಮತ್ತಿ 26.2 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕುಂದೂರು 44.8 ಮಿ.ಮೀ., ಆಲೂರು 48.6 ಮಿ.ಮೀ., ಕೆ. ಹೊಸಕೋಟೆ 92 ಮಿ.ಮೀ, ಪಾಳ್ಯ 70.8 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೆಬೀಡು 49.4 ಮಿ.ಮೀ., ಬೇಲೂರು 84.6 ಮಿ.ಮೀ., ಹಗರೆ 21.6 ಮಿ.ಮೀ., ಬಿಕ್ಕೋಡು 45.8 ಮಿ.ಮೀ., ಗೆಂಡೆಹಳ್ಳಿ 137 ಮಿ.ಮೀ., ಅರೆಹಳ್ಳಿ 80 ಮಿ.ಮೀ., ಮಳೆ ಬಿದ್ದಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 4.6 ಮಿ.ಮೀ., ಉದಯಪುರ 12 ಮಿ.ಮೀ., ಬಾಗೂರು 10 ಮಿ.ಮೀ., ನುಗ್ಗೆಹಳ್ಳಿ 6.2 ಮಿ.ಮೀ., ಶ್ರವಣಬೆಳಗೊಳ 3.8 ಮಿ.ಮೀ. ಮಳೆಯಾಗಿದೆ.