ಹಾಸನ: ವರದಕ್ಷಿಣೆ ಕಿರುಕುಳದಿಂದ ನವವಿವಾಹಿತೆ ನೇಣು ಬಿಗಿದಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಪುರಭವನ ಹಳ್ಳಿಯಲ್ಲಿ ನಡೆದಿದೆ.
ಗಂಡನಿಂದ ವರದಕ್ಷಿಣೆ ಕಿರುಕುಳ: ಹಾಸನದಲ್ಲಿ ನವವಿವಾಹಿತೆ ಆತ್ಮಹತ್ಯೆ - ಆಲೂರು ಪೊಲೀಸ್ ಠಾಣೆ
ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
![ಗಂಡನಿಂದ ವರದಕ್ಷಿಣೆ ಕಿರುಕುಳ: ಹಾಸನದಲ್ಲಿ ನವವಿವಾಹಿತೆ ಆತ್ಮಹತ್ಯೆ fdf](https://etvbharatimages.akamaized.net/etvbharat/prod-images/768-512-8324821-thumbnail-3x2-vis.jpg)
ಪ್ರಿಯಾ (23) ಮೃತ ದುರ್ದೈವಿ. ಎರಡು ತಿಂಗಳ ಹಿಂದಷ್ಟೇ ಕಿರಣ್ ಎಂಬುವವನಿಗೆ ಮೃತ ಪ್ರಿಯಾ ಪೋಷಕರು ವರದಕ್ಷಿಣೆಯಾಗಿ 150 ಗ್ರಾಂ ಚಿನ್ನಾಭರಣ ಮತ್ತು 9 ಲಕ್ಷ ರೂ ನಗದು ನೀಡಿ ಮದುವೆ ಮಾಡಿದ್ದರು. ಇಷ್ಟೆಲ್ಲ ವರದಕ್ಷಿಣೆ ನೀಡಿದ್ದರೂ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಗಂಡನ ಕಿರುಕುಳ ತಾಳಲಾರದೇ ಪ್ರಿಯಾ ತವರು ಮನೆಗೆ ಬಂದಿದ್ದಳು. ಕಿರಣ್ ಮತ್ತು ಪ್ರಿಯಾಳ ನಡುವೆ ರಾಜಿ ಸಂಧಾನ ಮಾಡಿ ಪೋಷಕರು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು.
ಆದರೆ, ಹಣದ ವ್ಯಾಮೋಹಕ್ಕೆ ಒಳಗಾಗಿದ್ದ ಕಿರಣ್ ಕಿರುಕುಳ ಮತ್ತಷ್ಟು ಹೆಚ್ಚು ಮಾಡಿದ್ದನಂತೆ. ಈ ಹಿನ್ನೆಲೆ ಗಂಡನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಪ್ರಿಯಾ ಪೋಷಕರು ಮಗಳ ಸಾವಿಗೆ ಕಿರಣ್ ಕಾರಣ ಎಂದು ಆರೋಪಿಸಿ ಆಲೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಆರೋಪದಡಿ ದೂರು ದಾಖಲಿಸಿದ್ದಾರೆ.