ಹಾಸನ: ಐಟಿ ದಾಳಿ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮೊನ್ನೆ ನಡೆದ ದಾಳಿಗೂ ಆದಾಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ, ಯಾವ ಅಧಿಕಾರಿ ಕೂಡ ದಾಳಿ ನಡೆಸಿಲ್ಲ ಎಂದು ಚುನಾವಣಾ ಆಯೋಗಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಮೊನ್ನೆ ದೇವೇಗೌಡರ ಕುಲದೇವರು ಆಗಿರುವ ಈಶ್ವರ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.ಇದರ ಬೆನ್ನಲ್ಲೇ ಅನುಮಾನಗೊಂಡ ಅರ್ಚಕ ಪ್ರಕಾಶ್ ಭಟ್ ಈಗ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ಮಾಡುವ ವೇಳೆ ಮೂರು ಮಂದಿ ಬಂದು ನಾವು ಆದಾಯ ತೆರಿಗೆ ಇಲಾಖೆಯವರು ಚುನಾವಣಾ ಸಂಬಂಧವಾಗಿ ದೇವಾಲಯ ಹಾಗೂ ತಮ್ಮ ಮನೆಯಲ್ಲಿ ಅಕ್ರಮವಾಗಿ ಜನರಿಗೆ ಹಂಚಲು ಹಣ ಮತ್ತು ಇನ್ನಿತರ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ನಮಗೆ ಮಾಹಿತಿ ಬಂದಿದೆ ಎಂದರು.