ಕರ್ನಾಟಕ

karnataka

ETV Bharat / state

ಹಾಸನ ಮಾರ್ಗವಾಗಿ ವಿಜಯಪುರ-ಮಂಗಳೂರು ನೂತನ ರೈಲು ಆರಂಭ - ವಿಜಯಪುರದಿಂದ ಮಂಗಳೂರು ರೈಲು ಸುದ್ದಿ

ನೈಋತ್ಯ ರೈಲ್ವೆ ಇಲಾಖೆ ವಿಜಯಪುರದಿಂದ ಮಂಗಳೂರು ಜಂಕ್ಷನ್‍ಗೆ ಹಾಸನ ಮಾರ್ಗವಾಗಿ ನೂತನ ರೈಲು ಆರಂಭಿಸಿದೆ.

ವಿಜಯಪುರ-ಮಂಗಳೂರು ನೂತನ ರೈಲು

By

Published : Nov 12, 2019, 11:39 AM IST

ಹಾಸನ: ನೈಋತ್ಯ ರೈಲ್ವೆ ಇಲಾಖೆ ವಿಜಯಪುರದಿಂದ ಮಂಗಳೂರು ಜಂಕ್ಷನ್‍ಗೆ ಹಾಸನ ಮಾರ್ಗವಾಗಿ ನೂತನ ರೈಲು ಆರಂಭಿಸಿದೆ.

ಗಾಡಿಸಂಖ್ಯೆ 07327/ 07328 ತತ್ಕಾಲ್ ರೈಲು ಪ್ರತಿದಿನ ವಿಜಯಪುರದಿಂದ ಮಂಗಳೂರಿಗೆ ಸಂಚರಿಸಲಿದ್ದು, ಈ ಮೂಲಕ ಉತ್ತರ ಕರ್ನಾಟಕದಿಂದ ಕರಾವಳಿಗೆ ರೈಲು ಸಂಪರ್ಕ ಸಾಧ್ಯವಾಗಿದೆ.

ಪ್ರತಿದಿನ ಸಂಜೆ 6.30 ಕ್ಕೆ ವಿಜಯಪುರದಿಂದ ಹೊರಟು ಬಸವನಬಾಗೇವಾಡಿ, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಗದಗ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಕಡೂರು, ಅರಸಿಕೆರೆಗೆ ಬೆಳಗಿನ ಜಾವ 5.15 ಕ್ಕೆ ಬರಲಿದೆ.

ವಿಜಯಪುರ-ಮಂಗಳೂರು ನೂತನ ರೈಲು

ಅರಸಿಕೆರೆಯಿಂದ ಬೆಳಗ್ಗೆ 5.25 ಕ್ಕೆ ಹೊರಟು 6.13 ಕ್ಕೆ ಹಾಸನಕ್ಕೆ ಬರಲಿದೆ. 6.15 ಕ್ಕೆ ಹಾಸನದಿಂದ ಹೊರಟು ಸಕಲೇಶಪುರಕ್ಕೆ 7.10 ಕ್ಕೆ ಆಗಮಿಸಿ, 7.30 ಕ್ಕೆ ಹೊರಡಲಿದೆ. ಮರುದಿನ ಮಧ್ಯಾಹ್ನ 12.40 ಕ್ಕೆ ಮಂಗಳೂರು ತಲುಪಲಿದೆ.

ಬಳಿಕ ಸಂಜೆ 4.30 ಕ್ಕೆ ಮಂಗಳೂರು ಬಿಡುವ ರೈಲು ಸಕಲೇಶಪುರಕ್ಕೆ ರಾತ್ರಿ 9 ಕ್ಕೆ ಆಗಮಿಸಿ ರಾತ್ರಿ 9.10 ಕ್ಕೆ ಬಿಡಲಿದೆ. ಹಾಸನಕ್ಕೆ ರಾತ್ರಿ 10 ಕ್ಕೆ ಆಗಮಿಸಿ ರಾತ್ರಿ 10.02 ಕ್ಕೆ ಬಿಡಲಿದೆ. ಅರಸಿಕೆರೆಗೆ ರಾತ್ರಿ 10.50 ಕ್ಕೆ ಆಗಮಿಸಿ 10.55 ಕ್ಕೆ ಬಿಡಲಿದೆ. ವಿಜಯಪುರಕ್ಕೆ ಮರುದಿನ 11 ಗಂಟೆಗೆ ತಲುಪಲಿದೆ.

ABOUT THE AUTHOR

...view details