ಕರ್ನಾಟಕ

karnataka

ETV Bharat / state

ನೂತನ ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಹೆಚ್​.ಕೆ ಕುಮಾರಸ್ವಾಮಿ ಸಾರಥ್ಯ - ದಲಿತ ವರ್ಗಕ್ಕೆ ತುಪ್ಪ ಸವರಿದ ಮಾಜಿ ಪ್ರಧಾನಿ ದೇವೇಗೌಡ

ಜೆಡಿಎಸ್​ನ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಕಲೇಶಪುರದ ಶಾಸಕ ಹೆಚ್​.ಕೆ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಲಾಗಿದೆ.

ನೂತನ ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಹೆಚ್​.ಕೆ ಕುಮಾರಸ್ವಾಮಿ ಸಾರಥ್ಯ

By

Published : Jul 5, 2019, 2:35 AM IST

ಹಾಸನ:ಜೆಡಿಎಸ್​ನ ನೂತನ ರಾಜ್ಯಾಧ್ಯಕ್ಷರನ್ನಾಗಿ ಸಕಲೇಶಪುರದ ಶಾಸಕ ಹೆಚ್​.ಕೆ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಘೋಷಣೆ ಮಾಡಿದ್ದಾರೆ.

ಬೇಲೂರು ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಗೆಲ್ಲುವ ಮೂಲಕ ಶಾಸಕರಾಗಿ ಸೇವೆ ಸಲ್ಲಿಸಿದ್ದ ಹೆಚ್.ಕೆ. ಕುಮಾರಸ್ವಾಮಿ, ಕ್ಷೇತ್ರ ಪುನರ್ ವಿಂಗಡಣೆ ವೇಳೆ ಬಳಿಕ 2008ರಲ್ಲಿ ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರ ಅಣತಿಯಂತೆ ಸಕಲೇಶಪುರ-ಆಲೂರು ಮೀಸಲು ವಿಧಾನಸಭೆ ಕ್ಷೇತ್ರಕ್ಕೆ ವಲಸೆ ಬಂದಿದ್ದರು..

2008, 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ತಮ್ಮದಾಗಿಸಿಕೊಂಡವರು. ಅಷ್ಠೇ ಅಲ್ಲ ತಮ್ಮ ಪತ್ನಿ ಚಂಚಲಾ ಕುಮಾರಸ್ವಾಮಿ ಅವರನ್ನು ಜಿ.ಪಂ. ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. ಸದ್ಯ ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್​. ವಿಶ್ವನಾಥ್ ರಾಜೀನಾಮೆ ನೀಡಿದ ಬೆನ್ನಲೇ ಹೆಚ್​.ಕೆ ಕುಮಾರಸ್ವಾಮಿಗೆ ಈ ಸ್ಥಾನ ನೀಡಲಾಗಿದೆ.

For All Latest Updates

TAGGED:

ABOUT THE AUTHOR

...view details